ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಎಸ್‌ಡಿಎ ಪರೀಕ್ಷೆ: ಅಂಗಿ ತೋಳು ಕತ್ತರಿಸಿಕೊಂಡ ಅಭ್ಯರ್ಥಿಗಳು

Published 19 ನವೆಂಬರ್ 2023, 8:12 IST
Last Updated 19 ನವೆಂಬರ್ 2023, 8:12 IST
ಅಕ್ಷರ ಗಾತ್ರ

ರಾಯಚೂರು: ನಗರದ 9 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಡಿಎ ದ್ವಿತೀಯ ವೃಂದದ ಪರೀಕ್ಷೆ ಭಾನುವಾರ ಸುಸೂತ್ರವಾಗಿ ನಡೆಯಿತು. ಪರೀಕ್ಷಾ ಪ್ರಾಧಿಕಾರ ವಸ್ತ ಸಂಹಿತೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಯುವತಿಯರು ಪ್ರವೇಶ ದ್ವಾರದಲ್ಲೇ ಹೈಹಿಲ್‌ ಚಪ್ಪಲಿ ಕಳೆದರೆ, ಯುವಕರು ಅಂಗಿ ತೋಳು ಕತ್ತರಿಸಿಕೊಂಡು ಪರೀಕ್ಷೆಗೆ ಹಾಜರಾದರು.

‌ಹಾಲ್‌ ಟಿಕೆಟ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದರೂ ಕೆಲವರು ಜೀನ್ಸ್‌, ಉದ್ದ ತೋಳಿನ ಶರ್ಟ್ ಧರಿಸಿ ಬಂದಿದ್ದರು. ಉದ್ದ ತೋಳಿನ ಶರ್ಟ್‌ ಹಾಕಿಕೊಂಡು ಬಂದಿದ್ದ ಅಭ್ಯರ್ಥಿಗಳಿಗೆ ಪೊಲೀಸರು ಪ್ರವೇಶ ದ್ವಾರದಲ್ಲಿ ಕತ್ತರಿ ಕೊಟ್ಟು ತೋಳು ಕತ್ತರಿಸಿಕೊಳ್ಳಲು ಸಲಹೆ ನೀಡಿದರು.

ಹಾಲ್‌ ಟಿಕೆಟ್‌ನಲ್ಲಿಯ ಸೂಚನೆ ನೋಡಿಕೊಳ್ಳದೇ ಬಂದಿದ್ದ ಕೆಲವರು ಅನ್ಯ ಮಾರ್ಗವಿಲ್ಲದೇ ಕತ್ತರಿಯಿಂದ ಅಂಗಿ ತೋಳು ಕತ್ತರಿಸಿ ಪ್ರವೇಶ ದ್ವಾರದಲ್ಲಿ ಬಿಸಾಕಿದರು. ಯುವತಿಯರು ಕಿವಿಯೋಲೆ, ಮೂಗುತಿ, ಕೊರಳಲ್ಲಿನ ಸರ ತೆಗೆದು ಸಂಬಂಧಿಕರ ಕೈಗೆ ಒಪ್ಪಿಸಿದರು. ನಂತರ ಅವರಿಗೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT