ಶನಿವಾರ, ಫೆಬ್ರವರಿ 4, 2023
18 °C

ಡಿ.ಯದ್ಲಾಪುರ: ಸೇವಾ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಿ.ಯದ್ಲಾಪುರ (ಶಕ್ತಿನಗರ): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸೂಗೂರು ವಲಯದ ಡಿ.ಯದ್ಲಾಪುರ ಗ್ರಾಮದಲ್ಲಿ ಯದ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಡೋಣಿ ಅವರು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಉದ್ಘಾಟಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ರಘುಪತಿಗೌಡ ಮಾತನಾಡಿ,‘ಯೋಜನೆ ವತಿಯಿಂದ ಪ್ರಗತಿ ನಿಧಿ ನೀಡುವುದಷ್ಟೇ ಅಲ್ಲದೆ, ಸ್ವ–ಸಹಾಯ ಸಂಘಗಳ ಸದಸ್ಯರಿಗೆ ಸ್ವ-ಉದ್ಯೋಗ ತರಬೇತಿ, ಆಯ್ದ ಮಕ್ಕಳಿಗೆ ಶಿಷ್ಯವೇತನ ವಿತರಣೆ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ರಾಜ್ಯದಲ್ಲಿ ಒಟ್ಟು 6000 ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಆ ಪೈಕಿ ರಾಯಚೂರು ಜಿಲ್ಲೆಯಲ್ಲಿ 135 ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇದರಿಂದ ಸದಸ್ಯರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಎಲ್ಲರೂ ಇದರ ಲಾಭ ಪಡೆಯಬೇಕು ಎಂದರು.

ಶಕ್ತಿನಗರ ರೋಟರಿ ಕ್ಲಬ್ ಕಾರ್ಯದರ್ಶಿ ಮಹೇಶ ಪೊಲೀಸ್ ಪಾಟೀಲ, ಮುಖಂಡ ಶಂಕರ್ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಚೋಟು, ಒಕ್ಕೂಟದ ಅಧ್ಯಕ್ಷೆ ನಿರ್ಮಲ, ದೇವಸೂಗೂರು ವಲಯದ ಮೇಲ್ವಿಚಾರಕ ಅನಿಲ್ ಕುಮಾರ್, ಸಿಎಸ್ಸಿ ನೋಡಲ್‌ ಅಧಿಕಾರಿ ನಾಗಯ್ಯ, ಸಿಬ್ಬಂದಿ ಶ್ವೇತಾ, ಸುವರ್ಣ ಹಾಗೂ ಸೇವಾ ಪ್ರತಿನಿಧಿಗಳಾದ ಸುಗುಣ, ನಿರ್ಮಲ, ಹನುಮಂತಿ, ಶೃತಿ, ಸುಮಾ, ಪ್ರೇಮಲತಾ ಮತ್ತು ಸಂಘದ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು