ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಸಿದ್ದರಾಮೇಶ್ವರ ಜಯಂತಿ

Last Updated 17 ಜನವರಿ 2022, 11:05 IST
ಅಕ್ಷರ ಗಾತ್ರ

ರಾಯಚೂರು: ಜಗತ್ತು ಕಂಡ ಮಹಾನ್ ಯೋಗಿ ಸಿದ್ಧರಾಮರು. ಅವರು ಜ್ಞಾನ, ಭಕ್ತಿ, ಕರ್ಮಯೋಗಿಯಾಗಿ ಸಮಾಜ ಸುಧಾರಕರಾಗಿ ಸೇವೆ ಮಾಡುತ್ತಿದ್ದಾರೆ. ಸಿದ್ದರಾಮರು ಅಲ್ಲಮಪ್ರಭುಗಳ ಎಚ್ಚರಿಕೆ ಮಾತುಗಳಿಂದ ಮಹಾನ್ ಶಿವಯೋಗಿಯಾಗಿ ಪೂರ್ಣತೆ ಸಾಧಿಸಿದ ವ್ಯಕ್ತಿ ಎಂದು ನಿವೃತ್ತ ಪ್ರಾಚಾರ್ಯ ಪರಮೇಶ್ವರ್ ಸಾಲಿಮಠ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ, ಹರ್ಡೇಕರ ಮಂಜಪ್ಪನವರ ಪುಣ್ಯ ಸ್ಮರಣೆ ಹಾಗೂ ಡಾ. ಚಂದ್ರಶೇಖರ ಪಾಟೀಲರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಪ್ರಿಂಕೋರ್ಟ್ ನಿವೃತ್ತ ವಕೀಲ ದೇವಣ್ಣ ನಾಯಕ, ಸಿ. ಬಿ. ಪಾಟೀಲ, ಹರ್ಡೇಕರ ಮಂಜಪ್ಪನವರ ಕುರಿತು ಮಾತನಾಡಿದರು. ರಾಚನಗೌಡ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ಚನ್ನಬಸವ ಎಂಜಿನಿಯರ್, ವಿಜಯಕುಮಾರ್ ಸಜ್ಜನ, ಎ. ವೀರಭದ್ರಪ್ಪ, ಶಾಂತಾ, ಪಿ. ಸೋಮಶೇಖರ್, ವೆಂಕಣ್ಣ, ಮಲ್ಲಿಕಾರ್ಜುನ ಗುಡಿಮನಿ, ವಿರೇಶ ಇದ್ದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿದರು. ಶರಣೆ ಪಾರ್ವತಿ ಪಾಟೀಲ್ ಸಂಗಡಿಗರು ವಚನ ಗಾಯನ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT