ಗುರುವಾರ , ಸೆಪ್ಟೆಂಬರ್ 23, 2021
24 °C
ಸಂತಸದಿಂದ ಮಕ್ಕಳನ್ನೆಲ್ಲ ಬರಮಾಡಿಕೊಂಡು ಶಿಕ್ಷಕರು

ಸಂಭ್ರಮದಿಂದ ಶಾಲೆಗೆ ಹಾಜರಾದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಮಾಧ್ಯಮಿಕ ಶಾಲೆಗಳ 6 ರಿಂದ 8ನೇ ತರಗತಿಗಳಲ್ಲಿ ಮತ್ತೆ ಮಕ್ಕಳ ಕಲರವ ಸೋಮವಾರದಿಂದ ಮರಳಿದೆ.

ಒಂದುವರೆ ವರ್ಷದ ಬಳಿಕ ವಿದ್ಯಾರ್ಥಿಗಳು ಪಾಲಕರೊಂದಿಗೆ ಶಾಲೆಗೆ ಮರಳುತ್ತಿರುವ ದೃಶ್ಯ ವಿಶೇಷವಾಗಿತ್ತು. ಪಾಲಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಕೆಲವೆಡೆ ಸರ್ಕಾರಿ ಶಾಲೆಗಳಲ್ಲಿ ತಳೀರು ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಮಕ್ಕಳಿಗೆ ಪುಷ್ಪ ಹಾಕಿ ಸ್ವಾಗತ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ಪಾಲಕರಿಂದ ಒಪ್ಪಿಗೆ ಪತ್ರಗಳನ್ನು ಬರೆಸಿಕೊಳ್ಳುತ್ತಿರುವುದು ಶಾಲಾ ಆವರಣದಲ್ಲಿ ಕಂಡುಬಂತು. ಮಾಧ್ಯಮಿಕ ಹಂತದವರೆಗೂ ಇರುವ ಶಾಲೆಗಳಲ್ಲಿ ಸೋಮವಾರ ಬೆಳಿಗ್ಗೆಯೇ ಮಕ್ಕಳು ತರಗತಿಗಳಿಗೆ ಹಾಜರಾದರು. ಪ್ರೌಢಶಾಲೆಗಳಿರುವ ಕಡೆಗಳಲ್ಲಿ ಮಧ್ಯಾಹ್ನ 1.30 ಕ್ಕೆ 6 ರಿಂದ 8 ತರಗತಿಗಳನ್ನು ಆರಂಭಿಸಲಾಯಿತು. ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಿದ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು ತರಗತಿ ಪ್ರವೇಶಿಸಿದರು.

ಮೌಲಾನಾ ಆಜಾದ್ ಮಾದರಿ ಶಾಲೆ: ರಾಯಚೂರು ನಗರದ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹಾಷ್ಮೀಯ ಶಾಲಾ ಆವರಣ ಹಾಗೂ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಯಲ್ಲಿ 2021-2022 ಶೈಕ್ಷಣಿಕ ಸಾಲಿನ 6 ನೇ ತರಗತಿಯಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಜರುಗಿತು.
ನಗರಸಭೆ ಸದಸ್ಯೆ ಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಅವರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೇಕ ಅಲಿ ಇದ್ದರು. ಮಕ್ಕಳಿಗೆ ನೋಟ್ ಪುಸ್ತಕ , ಪೆನ್‌ಗಳನ್ನು ವಿತರಿಸುವ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯ ಸೂಗೂರೇಶ್ವರ ಹಿರೇಮಠ, ಹಾಷ್ಮಿಯ ಶಾಲೆಯ ಮುಖ್ಯೋಪಾಧ್ಯಾಯ ಶಂಕರ್, ಶಿಕ್ಷಕರಾದ ವೆಂಕಟೇಶ, ಪುಲಿ ಆಂಜನೇಯ, ಸಯೀದ ಜರೀನ ಬಾನು, ಸಯೀದ ಬಾನು, ನಳಿನಾಕ್ಷಿ, ರಬಿಯಾ ಒಸ್ಮನಿ, ಗೌಸಿಯ ಬಾನು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.