ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ | ಬತ್ತಿದ ನದಿ: ಜನರಿಗೆ ನಿರಾಸೆ

Published 15 ಜನವರಿ 2024, 5:47 IST
Last Updated 15 ಜನವರಿ 2024, 5:47 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿ ನೀರಿಲ್ಲದೆ ಬತ್ತಿದ್ದು ಸಂಕ್ರಾಂತಿ ಪುಣ್ಯಸ್ನಾನಕ್ಕೆ ಬಂದಿದ್ದ ಜನರು ನಿರಾಸೆಗೆ ಕಾರಣವಾಯಿತು. 

‌ಜನರು ಪುಣ್ಯಸ್ನಾನಕ್ಕಾಗಿ ರಾಜಲಬಂಡಾ ಅಣೆಕಟ್ಟು, ಚೀಕಲಪರ್ವಿ ಮತ್ತಿತರ ನದಿಪಾತ್ರದ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ಈ ಬಾರಿ ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯ ಭರ್ತಿಯಾಗದ ಕಾರಣ ನದಿಯಲ್ಲಿ ನೀರು ಹರಿಯುತ್ತಿಲ್ಲ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ರಾಜಲಬಂಡಾ ಅಣೆಕಟ್ಟು ನೀರಿಲ್ಲದೆ ಭಣಗುಡುತ್ತಿದೆ.

ಸೋಮವಾರ ಸಂಕ್ರಾಂತಿ ಹಬ್ಬದ ಪುಣ್ಯ ಸ್ನಾನಕ್ಕಾಗಿ ಪಕ್ಕದ ಲಿಂಗಸೂಗುರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕುಗಳಲ್ಲಿ ಹರಿಯುವ ಕೃಷ್ಣಾ ನದಿ ತೀರದ ಸ್ಥಳಗಳಿಗೆ ಹೋಗುವ ಸಂಭವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT