ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಮ್ಸ್ ಮಂಜೂರಿಗೆ ನಿರ್ಣಯ ಕೈಗೊಳ್ಳಿ’

Last Updated 4 ಅಕ್ಟೋಬರ್ 2021, 16:43 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.

ರಾಯಚೂರು ಜಿಲ್ಲೆ ಕಲ್ಯಾಣ ಕರ್ನಾಟಕದಲ್ಲಿಯೇ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದ ನೀತಿ ಆಯೋಗದ ವರದಿಯಂತೆ ಕರ್ನಾಟಕದ ಅತೀ ಹಿಂದುಳಿದ ಜಿಲ್ಲೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅತೀ ಹಿಂದುಳಿದಿದೆ. ಮಹಿಳಾ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯಿಂದ ಕೂಡಿದ ಜಿಲ್ಲೆಯಾಗಿದೆ. ಸ್ವಾತಂತ್ರ್ಯನಂತರ ಜಿಲ್ಲೆಯಲ್ಲಿ ಕೆಪಿಸಿಎಲ್ ಮತ್ತು ವೈಟಿಪಿಎಸ್ ಹೊರತುಪಡಿಸಿ ಯಾವುದೇ ದೊಡ್ಡ ಯೋಜನೆ ಜಿಲ್ಲೆಗೆ ನೀಡಿಲ್ಲ ಎಂದು ದೂರಿದರು.

ನಂಜುಂಡಪ್ಪ ಆಯೋಗದ ವರದಿಯನ್ವಯ ರಾಯಚೂರು ಜಿಲ್ಲೆಗೆ ಐಐಟಿ ಮಂಜೂರು ಮಾಡಬೇಕಿದ್ದರೂ ಧಾರವಾಡದ ಪಾಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗಬೇಕಾದ ಸೌಲಭ್ಯಗಳು ಕಲಬುರಗಿ ಜಿಲ್ಲೆಗೆ ಹೋಗಿದೆ. ಈಚೆಗೆ ಕೋವಿಡ್ ನಿಂದ ತತ್ತರಿಸಿದ್ದು ಅಮೆರಿಕ ಬೋಯಿಂಗ್ ಸಂಸ್ಥೆಯಿಂದ ರಾಜ್ಯಕ್ಕೆ ಎರಡು ಆಸ್ಪತ್ರೆ ಮಂಜೂರಾಗಿವೆ. ರಾಯಚೂರಿಗೆ ನೀಡಬೇಕಿದ್ದ ಆಸ್ಪತ್ರೆಗಳನ್ನು ಕಲಬುರ್ಗಿ ಮತ್ತು ಬೆಂಗಳೂರಿಗೆ ಮಂಜೂರು ಮಾಡಿ ಈ ಭಾಗದ ಜನರಿಗೆ ಮತ್ತೊಮ್ಮೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಈ ಭಾಗದ ಜನರ ಆರೋಗ್ಯದ ಅಭಿವೃದ್ಧಿಗಾಗಿ ಏಮ್ಸ್ ಮಂಜೂರು ಮಾಡಬೇಕು. ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ಜನರಿಗೆ ನೇರವಾಗಿ ರೈಲು ಸಂಪರ್ಕ ಇರುವುದರಿಂದ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಕ್ಯಾಬಿನೆಟ್ ನಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ವೀರಶೈವ ಹಿತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಪವನ್ ಪಾಟೀಲ, ಸಮಾಜ ಸೇವಕ ನರೇಂದ್ರ ಆರ್ಯ, ಡಾ. ಶಾರದಾ ಹುಲಿ ನಾಯಕ, ಮುನೆಪ್ಪ ಕೆ. ರಂಗನಾಥ, ಶ್ಯಾಮ ನಿಜಾಮಕಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT