ಸಿಂಧನೂರು: ರಾಯಚೂರು ಎಪಿಎಂಸಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಹಿನ್ನೆಲೆಯಲ್ಲಿ ಸಿಂಧನೂರಿನ ಪ್ರವಾಸಿ ಮಂದಿರದಲ್ಲಿ ಕರೆದ ಬಿಜೆಪಿ ಕೋರ್ ಕಮಿಟಿ ಸದಸ್ಯರ ಸಭೆ ನಡೆಯುವ ಮುನ್ನವೇ ಮಾರಾಮಾರಿ ನಡೆದಿದ್ದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂಡೇಶ ವಲ್ಕಂದಿನ್ನಿ ಅವರ ಮೇಲೆ ರಾಯಚೂರಿನಿಂದ ಬಂದಿದ್ದ ಕೆಲವರು ದೈಹಿಕವಾಗಿ ಹಲ್ಲೆಗೊಳಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಶಾಸಕರಾದ ಮಾನಪ್ಪ ವಜ್ಜಲ್, ಪ್ರತಾಪಗೌಡ ಪಾಟೀಲ್ ಮಸ್ಕಿ, ಬಿಜೆಪಿ ಜಿಲ್ಲಾಧ್ಯಕ್ಷ ಅಮರೇಶ ಹೊಸಮನಿ ಅವರ ಬಳಿಗೆ ಮಾತನಾಡಲು ಹೋಗುತ್ತಿರುವಾಗಲೆ ಬಿಜೆಪಿ ಮುಖಂಡರನ್ನು ತಪ್ಪುದಾರಿಗೆ ಎಳೆದು ಪಕ್ಷದಲ್ಲಿ ಅಂತಃಕಲಹ ಸೃಷ್ಠಿಸುತ್ತಿದ್ದಾನೆ ಎಂದು ಆರೋಪಿಸಿ ಏಕಾಏಕಿ ಕೆಲ ಯುವಕರು ಬಂಡೇಶ ವಲ್ಕಂದಿನ್ನಿ ಅವರ ಮೇಲೆ ಮುಗಿಬಿದ್ದರು. ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ ಮಾಳಿಗೇರ, ಪಿಎಸ್ಐ ಲಿಂಗಪ್ಪ ಎನ್.ಆರ್. ಅವರು ಉದ್ರಿಕ್ತರ ಮೇಲೆ ಲಾಠಿ ಬೀಸಿ ಹತೋಟಿಗೆ ತಂದರು.

ಹಿನ್ನೆಲೆ: ರಾಯಚೂರು ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಆರ್.ತಿಮ್ಮಯ್ಯ, ಕಡಗೋಲ ಆಂಜನೇಯ, ಕೇಶವರೆಡ್ಡಿ ಮತ್ತಿತರರು ಪೈಪೋಟಿ ನಡೆಸಿದ್ದರಿಂದ ಒಮ್ಮತದ ವ್ಯಕ್ತಿಯನ್ನು ನೇಮಕ ಮಾಡುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ ರಾಜ್ಯ ಸಮಿತಿಯು ಕೋರ್ಕಮಿಟಿಯ ಮೂಲಕ ನಿರ್ಧಾರ ಕೈಗೊಳ್ಳುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಮರೇಶ ಹೊಸಮನಿ ಸಿಂಧನೂರಿನಲ್ಲಿ ಸಭೆ ಕರೆದಿದ್ದರು. ಶಾಸಕರು ಹಾಗೂ ಪಕ್ಷದ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದು ರಾಯಚೂರು ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರಿಗೆ ಆಹ್ವಾನ ನೀಡದಿರುವುದರಿಂದ ಅವರ ಬೆಂಬಲಿಗರು ಸಿಂಧನೂರಿನಲ್ಲಿ ಸಭೆ ಕರೆದಿರುವ ಮತ್ತು ತಮ್ಮ ನಾಯಕರಿಗೆ ಆಹ್ವಾನ ನೀಡದಿರುವ ಬಗ್ಗೆ ಸಿಟ್ಟಿಗೆದ್ದು ಸಿಂಧನೂರಿಗೆ ಬಂದು ಬಿಜೆಪಿ ಜಿಲ್ಲಾಧ್ಯಕ್ಷರೊಂದಿಗೆ ತಗಾದೆ ತೆಗೆದರು.

ಸಭೆ ರದ್ದು: ಜಿಲ್ಲಾಧ್ಯಕ್ಷರ ಆಹ್ವಾನದ ಮೇರೆಗೆ ಸಭೆಗೆ ಆಗಮಿಸಿದ್ದ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಮತ್ತು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರನ್ನು ಪಾಪಾರೆಡ್ಡಿ ಬೆಂಬಲಿಗರು ಗುಪ್ತವಾಗಿ ಸಭೆ ಕರೆದ ಉದ್ದೇಶವೇನು?, ರಾಯಚೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮುಖಂಡರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಬೇಕು ಇಲ್ಲವೆ ಚುನಾವಣೆ ಮೂಲಕ ಆಯ್ಕೆ ಮಾಡಬೇಕು. ಆದರೆ ಈ ರೀತಿ ಗುಪ್ತ ಸಭೆ ಕರೆದಿರುವುದರಲ್ಲಿ ತಮಗೆ ಮೋಸ ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಆವೇಶದಿಂದ ಮಾತನಾಡಿದರು ಎನ್ನಲಾಗಿದೆ. ಎಲ್ಲರನ್ನು ಆಹ್ವಾನಿಸದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಸಭೆ ನಡೆಸುವುದಿಲ್ಲವೆಂದು ಶಾಸಕರಾದ ಮಾನಪ್ಪ ವಜ್ಜಲ, ಪ್ರತಾಪಗೌಡ ಅವರು ಎಂದು ರಾಯಚೂರಿನಿಂದ ಬಂದಿದ್ದ ಮುಖಂಡರಿಗೆ ಭರವಸೆ ನೀಡಿದ್ದಾರೆ.

ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮನೋಹರ ಮಸ್ಕಿ, ಜಿಲ್ಲಾಧ್ಯಕ್ಷ ಹೊಸಮನಿ ಸಿಂಧನೂರಿನಲ್ಲಿ ಕರೆದ ಕೋರ್ಕಮಿಟಿ ಸಭೆಗೆ ರಾಯಚೂರಿನ ಹಲವು ಮುಖಂಡರು ವಿರೋಧ ವ್ಯಕ್ತವಾಗಿರುವ ಬಗ್ಗೆ ರಾಜ್ಯ ಮುಖಂಡರ ಗಮನಕ್ಕೆ ತರುವುದಾಗಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.