ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: 23 ಹೊಸ ಪ್ರಕರಣ ಪತ್ತೆ

Last Updated 10 ಜುಲೈ 2020, 15:32 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರ 23 ಮಂದಿಯಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿದೆ.

ಮಾಗಡಿ 5, ಚನ್ನಪಟ್ಟಣ 2, ಕನಕಪುರ 10 ಮತ್ತು ರಾಮನಗರದಲ್ಲಿ 6 ಪ್ರಕರಣಗಳು ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಒಟ್ಟು 355ಕ್ಕೆ ಏರಿದೆ.

ಇದರಲ್ಲಿ ಕನಕಪುರ 82, ಮಾಗಡಿ 127, ಚನ್ನಪಟ್ಟಣ 56 ಮತ್ತು ರಾಮನಗರದ 90 ಪ್ರಕರಣಗಳು ಸೇರಿವೆ. ಶುಕ್ರವಾರ ಆಸ್ಪತ್ರೆಯಿಂದ 29 ಮಂದಿ ಗುಣಮುಖರಾಗಿ ಹೊರ ಬಂದಿದ್ದಾರೆ. ಒಟ್ಟಾರೆ 186 ಜನರು ಗುಣಮುಖರಾಗಿದ್ದರೆ, ಇನ್ನೂ 161 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಮನಗರದ ಎಂ.ಜಿ. ರಸ್ತೆಯ ನಿವಾಸಿಯೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಒಂದು ಬೀದಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಸ್ಟೇಷನ್‌ ರಸ್ತೆಯ ಕೆಲವು ಅಂಗಡಿ ಹಾಗೂ ಹೋಟೆಲ್‌ ಸಹ ಬಂದ್‌ ಆಗಿದೆ.

ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿನ ಪಾರ್ಲರ್‌ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಸವಿತಾ ಸಮಾಜದ ಮುಖಂಡರು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT