ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ಕಾಡಾನೆ ದಾಳಿ ತಡೆಗೆ 641 ಕಿ.ಮೀ ಬ್ಯಾರಿಕೇಡ್: ಖಂಡ್ರೆ

ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ
Published 4 ಜೂನ್ 2023, 16:38 IST
Last Updated 4 ಜೂನ್ 2023, 16:38 IST
ಅಕ್ಷರ ಗಾತ್ರ

ರಾಮನಗರ: ಕಾಡಾನೆಗಳ ದಾಳಿ ತಡೆಗೆ ರಾಜ್ಯದಾದ್ಯಂತ ಸುಮಾರು 641 ಕಿ.ಮೀ. ಪ್ರದೇಶದಲ್ಲಿ ಬ್ಯಾರಿಕೇಡ್‌ (ರೈಲ್ವೆ ಬ್ಯಾರಿಕೇಡ್) ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ 310 ಕಿ.ಮೀ. ಬ್ಯಾರಿಕೇಡ್ ನಿರ್ಮಾಣ ಪೂರ್ಣಗೊಂಡಿದೆ. ರಾಮನಗರದಲ್ಲಿ 73 ಕಿ.ಮೀ. ನಿರ್ಮಾಣವಾಗಬೇಕಿದೆ. 1 ಕಿ.ಮೀ ಬ್ಯಾರಿಕೇಡ್‌ಗೆ ಸುಮಾರು ₹1.50 ಕೋಟಿ ವೆಚ್ಚವಾಗಲಿದ್ದು, ಕಾಮಗಾರಿ ಪೂರ್ಣಗೊಳಿಸಲು ಅಂದಾಜು ₹500 ಕೋಟಿ ಅಗತ್ಯವಿದೆ’ ಎಂದರು.

‘ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳಿಗೆ ಕಾಡಾನೆಗಳ ಬರದಂತೆ ತಡೆಯಲು ಸೋಲಾರ್ ಬೇಲಿ ನಿರ್ಮಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಆ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ, ಕಾರ್ಯಗತಗೊಳಿಸಲಾಗುವುದು’ ಎಂದು ತಿಳಿಸಿದರು.

‘ವನ್ಯಜೀವಿಗಳ ದಾಳಿಯಿಂದ 2019ರಿಂದ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅದರಲ್ಲಿ ಆನೆಗಳ ದಾಳಿಯಿಂದ ಸಾವಿಗೀಡಾದವರೇ ಹೆಚ್ಚು’ ಎಂದು ಹೇಳಿದರು.

ಬ್ಯಾಂಕ್ ಖಾತೆಯೇ ಇಲ್ಲ: ‘ಆನೆ ದಾಳಿಯಿಂದ ಚನ್ನಪಟ್ಟಣದ ವಿರುಪಸಂದ್ರದಲ್ಲಿ ಜೂನ್ 3ರಂದು ಮೃತಪಟ್ಟ ತೋಟದ ಕಾವಲುಗಾರ, ಬುಡಕಟ್ಟು ಜನಾಂಗದ ವೀರಭದ್ರಯ್ಯ ಅವರ ಕುಟುಂಬ ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ. ಕುಟುಂಬದವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ₹15 ಲಕ್ಷ ಪರಿಹಾರ ಮೊತ್ತವನ್ನು ಖಾತೆಗೆ ಜಮಾ ಮಾಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ಸಾಗುವಳಿದಾರರಿಗೆ ಪರಿಹಾರ: ‘ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುವವರ ಒಕ್ಕಲೆಬ್ಬಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಪರಿಹಾರ ನೀಡುವ ಕೆಲಸ ರಾಮನಗರದಿಂದಲೇ ಆರಂಭವಾಗಲಿದೆ. ಈ ಬಗ್ಗೆ ಸಂಸದರು ಪ್ರಸ್ತಾವ ಸಲ್ಲಿಸಿದ್ದಾರೆ. ಅದರಂತೆ, ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸಮೀಕ್ಷೆ ನಡೆಸಿದ್ದಾರೆ. ರಾಜ್ಯದಲ್ಲಿರುವ ಇಂತಹ ಪ್ರಕರಣಗಳನ್ನು ಒಟ್ಟಾಗಿ ಸೇರಿಸಿ ಪರಿಹಾರ ಒದಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT