ಮಂಗಳವಾರ, ಮೇ 18, 2021
30 °C
ವಾರಾಂತ್ಯ, ಯುಗಾದಿ ರಜೆ; ಸಂಜೆ ನಂತರ ಪ್ರಯಾಣಿಕರ ದಟ್ಟಣೆ

ರಾಮನಗರ: ಮುಷ್ಕರ ನಡುವೆಯೂ ಬಸ್ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಮೂರನೇ ದಿನವಾದ ಶುಕ್ರವಾರವೂ ಮುಂದುವರಿಯಿತು. ಈ ನಡುವೆಯೂ ರಾಮನಗರ ಘಟಕ ವ್ಯಾಪ್ತಿಯಲ್ಲಿ 9 ಬಸ್‌ಗಳು ಸಂಚಾರ ನಡೆಸಿದವು.

ರಾಮನಗರ ಡಿಪೊದಿಂದ 5, ಆನೇಕಲ್ ಡಿಪೊದಿಂದ 2 ಹಾಗೂ ಹಾರೋಹಳ್ಳಿ, ಚನ್ನಪಟ್ಟಣ ಡಿ‍ಪೊದಿಂದ ತಲಾ 1 ಬಸ್‌ಗಳು ಕಾರ್ಯಾಚರಣೆ ನಡೆಸಿದವು. ರಾಮನಗರ ಬಸ್ ನಿಲ್ದಾಣದಿಂದ ಚನ್ನಪಟ್ಟಣ, ಮಾಗಡಿ, ಕನಕಪುರ, ಬಿಡದಿ ಹಾಗೂ ಆನೇಕಲ್ ಬಸ್ ನಿಲ್ದಾಣದಿಂದ ಹೊಸೂರು ಮಾರ್ಗದಲ್ಲಿ ಬಸ್ ಸಂಚರಿಸಿದವು. ಆದರೆ ಈ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಾತ್ರ ಕಡಿಮೆ ಇತ್ತು. ಬೇರೆ ಬೇರೆ ಹುದ್ದೆಯಲ್ಲಿ ಇದ್ದವರನ್ನೂ ಬಸ್‌ ಸೇವೆಗೆ ನಿಯೋಜನೆ ಮಾಡಲಾಗಿತ್ತು.

ವಾರಾಂತ್ಯ ಹಾಗೂ ಯುಗಾದಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸಂಚಾರ ದಟ್ಟಣೆ ಕಂಡುಬಂದಿತು. ಹೆಚ್ಚಿನ ಮಂದಿ ಬೆಂಗಳೂರು, ರಾಮನಗರದಿಂದ ಹೊರ ಊರುಗಳತ್ತ ಹೊರಟರು. ಹೀಗಾಗಿ ಖಾಸಗಿ ಬಸ್‌ಗಳಲ್ಲಿ ಸಂಜೆ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.

ಗ್ರಾಮೀಣ ಸಾರಿಗೆಗೆ ಹೊಡೆತ

ಮುಷ್ಕರ ಆರಂಭವಾದ ದಿನದಿಂದ ಈವರೆಗೆ ಖಾಸಗಿ ಬಸ್‌, ಮ್ಯಾಕ್ಸಿಕ್ಯಾಬ್‌ ಮೊದಲಾದ ವಾಹನಗಳು ನಗರ ಸಾರಿಗೆಯತ್ತ ಮುಖ ಮಾಡಿವೆ. ಹೆಚ್ಚಿನ ವಾಹನಗಳು ಬೆಂಗಳೂರು–ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಇಷ್ಟು ದಿನ ಹಳ್ಳಿಗಳಿಗೆ ಸಾರಿಗೆ ಸೇವೆ ಒದಗಿಸುತ್ತಿದ್ದ ಈ ವಾಹನಗಳ ಸೇವೆ ಇಲ್ಲದೆ ಗ್ರಾಮೀಣ ಜನರು ಪಟ್ಟಣದತ್ತ ಬರಲು ಪರದಾಟ ನಡೆಸುವಂತೆ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು