ಗುರುವಾರ , ಆಗಸ್ಟ್ 5, 2021
22 °C

ರಾಮನಗರ: ಬಸ್ ಹರಿದು ಬಾಲಕಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬಸ್ ಹರಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮಾಗಡಿ ತಾಲ್ಲೂಕಿ‌ನ ಹೊನ್ನಾಪುರದ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ಜೀವಿತಾ (6) ಮೃತ ಬಾಲಕಿ. ಆಕೆ ಬೆಂಗಳೂರಿನಿಂದ ತನ್ನ ಅಜ್ಜಿ ಜತೆ ಉಜ್ಜಿನಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಬಸ್ ನ ಟೈರ್ ಸ್ಫೋಟಗೊಂಡಿದ್ದು, ಚಾಲಕ‌ ಏಕಾಏಕಿ  ಬ್ರೇಕ್ ಹಾಕಿದ್ದಾನೆ.  ಈ ಸಂದರ್ಭ ಬಸ್ ನ ಮುಂಭಾಗದ ಗಾಜಿನ ಬಳಿಯೇ ಕುಳಿತಿದ್ದ ಬಾಲಕಿ, ನಿಯಂತ್ರಣ ತಪ್ಪಿ ಗಾಜು ಒಡೆದುಕೊಂಡು ಬಸ್‌ನ ಮುಂದೆಯೇ ಬಿದ್ದಿದ್ದಾಳೆ. ನಂತರ ಅದೇ ಬಸ್ ನ ಮುಂಭಾಗದ ಚಕ್ರ ಬಾಲಕಿ ಮೇಲೆ ಹರಿದಿದೆ. ಇದರಿಂದ ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.

ಕುಮಾರ್ ಹಾಗೂ ಜ್ಯೋತಿ ದಂಪತಿಗೆ ಈಕೆ ಏಕೈಕ ಪುತ್ರಿಯಾಗಿದ್ದು, ಕುಟುಂಬದವರ ರೋಧನ ಹೆಚ್ಚಿತ್ತು. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು