ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು | ನಾರಸಂದ್ರದಲ್ಲಿ ಬೋನಿಗೆ ಬಿದ್ದ ಚಿರತೆ

Published 30 ಜೂನ್ 2024, 13:57 IST
Last Updated 30 ಜೂನ್ 2024, 13:57 IST
ಅಕ್ಷರ ಗಾತ್ರ

ಕುದೂರು: ನಾರಸಂದ್ರ ಗ್ರಾಮದ ರೈತ ರೇಣುಕಪ್ಪ ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ಮಧ್ಯರಾತ್ರಿ ಚಿರತೆ ಸೆರೆಯಾಗಿದೆ.

ಸೆರೆಯಾದ ಗಂಡು ಚಿರತೆ 3ರಿಂದ 4ವರ್ಷ ಪ್ರಾಯದ್ದಾಗಿದೆ. ಸೆರೆಸಿಕ್ಕ ಚಿರತೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿ ಅಂಜನಮೂರ್ತಿ ತಿಳಿಸಿದರು.

ಕಳೆದ ಹತ್ತು ದಿನಗಳ ಹಿಂದೆ ನಾರಸಂದ್ರ ಗ್ರಾಮಸ್ಥರು ಮಾಗಡಿ ವಲಯ ಅರಣ್ಯಾಧಿಕಾರಿ ಚೈತ್ರಾ ಅವರಿಗೆ ಚಿರತೆ ಓಡಾಟದ ಬಗ್ಗೆ ಮಾಹಿತಿ ನೀಡಿದ್ದರು.

ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಚೈತ್ರಾ, ಡಿಆರ್‌ಎಫ್‌ಒ ಶ್ರೀನಿವಾಸ್, ಸಿಬ್ಬಂದಿ ಅನಿಲ್, ರಕ್ಷಿತ್ ಭಾಗವಹಿಸಿದ್ದರು.

ನಾರಸಂದ್ರ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಫಾರೆಸ್ಟರ್ ಅಂಜನಮೂರ್ತಿ ಮತ್ತು ತಂಡ.
ನಾರಸಂದ್ರ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಫಾರೆಸ್ಟರ್ ಅಂಜನಮೂರ್ತಿ ಮತ್ತು ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT