ಮಂಗಳವಾರ, ಜೂನ್ 28, 2022
26 °C

ಕೃಷಿ ಚಟುವಟಿಕೆ ಬಿರುಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಮಳೆ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದೆ. ಕೋವಿಡ್-19 ಎರಡನೇ ಅಲೆಗೆ ರೈತರು ಬೆಳೆದಿದ್ದ ಕೆಲವು ಬೆಳೆಗಳು ಬೆಲೆಯಿಲ್ಲದೆ, ಮತ್ತು ಖರೀದಿದಾರರು ಇಲ್ಲದೆ ಹೊಲ-ಗದ್ದೆಗಳಲ್ಲೇ ಬಿಡಲಾಯಿತು. ಬಿತ್ತನೆಗೆ ಮುಂಗಾರು ಮಳೆ ಅತ್ಯಂತ ಮಹತ್ವವಾದದ್ದು, ಇದನ್ನು ನಂಬಿರುವ ಅನ್ನದಾತ ಈಗಾಗಲೇ ಪೂರ್ವಸಿದ್ಧತೆಯನ್ನು ಹೋಬಳಿಯಾದ್ಯಂತ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಲಾಕ್‌ಡೌನ್‌ನಿಂದ ಸ್ತಬ್ಧ ಗೊಂಡಿರುವ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗಬಾರದು ಎಂದು ಸರ್ಕಾರ ಘೋಷಿಸಿದೆ. ಇದರ ಭಾಗವಾಗಿ ಎಲ್ಲಾ ರಸಗೊಬ್ಬರಗಳು ಹಾಗೂ ಬಿತ್ತನೆ ಬೀಜಗಳು ಲಭ್ಯವಿದ್ದು, ಅಗತ್ಯ ಬೀಜಗಳನ್ನು ಹಾಗೂ ರಸಗೊಬ್ಬರವನ್ನು ರೈತರಿಗೆ ನೀಡಲು ಯಾವುದೇ ತೊಂದರೆಗಳಿಲ್ಲ. ರೈತರು ಯಾವುದೇ ರೀತಿಯ ಸಂಕಷ್ಟಕ್ಕೆ ಒಳಗಾಗದೇ ತಮ್ಮ ದುಡಿಮೆಯನ್ನು ಮಾಡಲು ನಿರತರಾಗಿದ್ದಾರೆ.

ತಾಲ್ಲೂಕುಗಳಲ್ಲಿಯೂ ಸಹ ಹೆಚ್ಚಾಗಿ ಮಳೆ ಬಂದಿರುವುದರಿಂದ ಮುಂಗಾರು ಬಿತ್ತನೆ ಮಾಡುವುದಕ್ಕೆ ರೈತರು ತಯಾರು ಮಾಡುತ್ತಿದ್ದಾರೆ. ರಾಗಿ, ಭತ್ತ, ಮುಸುಕಿನ ಜೋಳ, ದ್ವಿದಳ ಧಾನ್ಯ ಎಣ್ಣೆ ಕಾಳುಗಳು ಪ್ರಮುಖ ಬಿತ್ತನೆ ಬೆಳೆಗಳಾಗಿದೆ. ಅತ್ಯಧಿಕವಾಗಿ ಬಿತ್ತನೆ ಕಾರ್ಯನಡೆದಿದೆ. ಬೇಕಾಗಿರುವ ಬಿತ್ತನೆ ಬೀಜಗಳನ್ನು ಈಗಾಗಲೇ ವಿತರಿಸಿದ್ದೇವೆ. ಆಗಸ್ಟ್‌ವರೆವಿಗೂ ಬಿತ್ತನೆ ಕಾರ್ಯ ನಡೆಯುತ್ತದೆ. ಮಳೆ ಉತ್ತಮವಾಗಿರುವುದರಿಂದ ರೈತರಿಗೆ ಸಹಾಯವಾಗಿದೆ ಕೋವಿಡ್ ಲಾಕ್‌ಡೌನ್‌ನಲ್ಲೂ ಸರ್ಕಾರದ ಅನುಮತಿಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ರಾಮನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆ.ಎಂ ಸೋಮಸುಂದರ್ ತಿಳಿಸಿದರು.

‘ರಸಗೊಬ್ಬರಗಳು ಲಾಕ್‌ಡೌನ್ ಸಮಸ್ಯೆ ಇಲ್ಲದೆ ನಿಗದಿತ ಬೆಲೆಯಲ್ಲಿ ನಮಗೆ ಸಿಗುತ್ತದೆ. ಮಳೆ ಚೆನ್ನಾಗಿ ಈ ವರ್ಷ ಬಿದ್ದಿರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿದ್ದೇವೆ. ರಸ ಗೊಬ್ಬರ, ಡಿ.ಎ.ಪಿ, ಯೂರಿಯಾ, ಇನ್ನೂ ಮುಂತಾದವು ರಸಗೊಬ್ಬರಗಳನ್ನು ಖರೀದಿಸಿ ಭತ್ತ, ರಾಗಿ, ಜೋಳ, ಬೆಳೆಯುತ್ತಿದ್ದೇವೆ’ ಎಂದು ರೈತ ರಾಜು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು