ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ದಿನಗಳ ಕಲೋತ್ಸವಕ್ಕೆ ಸಂಭ್ರಮದ ತೆರೆ

Published 13 ಜೂನ್ 2024, 6:45 IST
Last Updated 13 ಜೂನ್ 2024, 6:45 IST
ಅಕ್ಷರ ಗಾತ್ರ

ಕುದೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವತಿಯಿಂದ ಮೂರು ದಿನಗಳ ಕಲೋತ್ಸವ ಕಾರ್ಯಕ್ರಮ ಈಚೆಗೆ ನಡೆಯಿತು.

ಕಲೋತ್ಸವ ಅಂಗವಾಗಿ ಕಾಲೇಜಿನ ಆವರಣವನ್ನು ಸಿಂಗರಿಸಲಾಗಿತ್ತು. ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ.ಕೆ.ಎಚ್ ಗುರುಮೂರ್ತಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾನವೀಯ ಮೌಲ್ಯ, ಸಂಘಟನಾ ಶಕ್ತಿ,ಸಂವಹನ ಕೌಶಲ ಬೆಳೆಸುತ್ತವೆ. ವಿದ್ಯಾರ್ಥಿಗಳ ಕ್ರಿಯಾಶೀಲತೆ, ಪ್ರತಿಭೆ ಮತ್ತು ಕೌಶಲ ಪ್ರದರ್ಶನಕ್ಕೆ ಕಲೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮ ಸೂಕ್ತ ವೇದಿಕೆ ಒದಗಿಸುತ್ತವೆ ಎಂದರು.

ಉನ್ನತ ಶಿಕ್ಷಣ ಪಡೆಯುವಾಗ ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶ ತುಂಬಾ ಇರುತ್ತವೆ. ಅದರ ಸದ್ಬಳಕೆ ವಿದ್ಯಾರ್ಥಿಯೇ ರೂಡಿಸಿಕೊಳ್ಳಬೇಕು. ಆಗ ಕಲಿಕೆಯ ಜೊತೆಗೆ ಸ್ವಯಂ ಪ್ರೇರಿತ ಅಧ್ಯಯನ ಬಹಳಷ್ಟು ಯಶಸ್ಸಿಗೆ ಪ್ರಯೋಜನಕಾರಿಯಾಗುತ್ತದೆ ಎಂದು ಉಪನ್ಯಾಸಕ ಸಿದ್ದೇಶ್ವರ್ ಕಿವಿಮಾತು ಹೇಳಿದರು.

ಪ್ರಾಧ್ಯಾಪಕರಾದ ರಾಜಕುಮಾರ್, ರಾಘವೇಂದ್ರ, ದೇವರಾಜ್, ಸಿದ್ದೇಶ್ವರ, ಜಗದೀಶ್ ಜೆ, ಪುಟ್ಟಲಕ್ಷ್ಮಯ್ಯ, ಕೃಷ್ಣವೇಣಿ, ತ್ಯಾಗರಾಜ, ಶಿವರಾಜ್ ಮತ್ತು ಡಾ. ಮುರಳಿ ಕೂಡ್ಲೂರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲತಾ ಕಾರ್ಯಕ್ರಮ ನಿರೂಪಿಸಿದರು. ಭೂಮಿಕಾ ಸ್ವಾಗತಿಸಿದರು. ಮಮತಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT