ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿ ಅಂತ್ಯಕ್ಕೆ ಮೊದಲೇ ಆಕಾಂಕ್ಷೆ

ಬಿಡದಿ ಪುರಸಭೆ: ಮುಂದಿನ ಚುನಾವಣ ಕಸರತ್ತು ಆರಂಭ
Last Updated 1 ಜೂನ್ 2021, 3:34 IST
ಅಕ್ಷರ ಗಾತ್ರ

ಬಿಡದಿ: ಪುರಸಭೆಯ ಆಡಳಿತ ಅವಧಿ ಅಂತ್ಯ ಸಮೀಪಿಸುತ್ತಿದ್ದಂತೆ 23 ವಾರ್ಡ್‌ಗಳಲ್ಲಿಯೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಈಗಾಗಲೇ ಸರ್ಕಾರವೂ ಚುನಾವಣೆಯನ್ನು 6 ತಿಂಗಳ ಕಾಲ ಮುಂದೂಡಬೇಕು ಎಂಬ ಆದೇಶವನ್ನು ಹೊರಡಿಸಿದ್ದರೂ ಆಕಾಂಕ್ಷಿಗಳು ಹಾಗೂ ಮರು ಆಯ್ಕೆ ಬಯಸಿದವರ ಪಟ್ಟಿ ಬೆಳೆಯುತ್ತಿದೆ.

ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದು, ವಾರ್ಡ್‌ಗಳಲ್ಲಿಯೂ ಬಿಸಿಬಿಸಿ ಚರ್ಚೆ ಶುರುವಾಗಿದೆ. ವಾರ್ಡ್‌ಗಳಲ್ಲಿ ಕಳೆದ ಬಾರಿ ವಿಜೇತರಾಗಿದ್ದ ಸದಸ್ಯರು ವಾರ್ಡ್‌ಗಳಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದರು. ಕೋವಿಡ್ ಸಂಕಷ್ಟದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮರು ಆಯ್ಕೆ ಬಯಸಿದರೆ ಮುಂದೆ ಏನೆಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾರೆ ಎಂಬ ಅಂದಾಜು ಮಾಡಲಾಗುತ್ತಿದೆ.

ಕೆಲವೊಂದು ವಾರ್ಡ್‌ಗಳಲ್ಲಿ ಮೀಸಲಾತಿಯಲ್ಲಿ ಸ್ಪಲ್ಪ ಗೊಂದಲವಿದ್ದರೂ ಚುನಾವಣೆಯೂ ಇನ್ನು 6 ತಿಂಗಳು ಇರುವುದರಿಂದ ಸ್ಪಲ್ಪ ತಣ್ಣಗಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಈ ಬಾರಿ ಚುನಾವಣೆ ನಡೆದರೆ ತೀವ್ರ ಜಿದ್ದಾ ಜಿದ್ದಿಯಾಗೂವ ಲಕ್ಷಣ ಗೋಚರವಾಗುತ್ತಿದೆ. ಜಿಲ್ಲೆಯವರಾದ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪ್ರತಿಷ್ಠೆಯಾಗಿದ್ದರೆ, ಇದೇ ಜಿಲ್ಲೆಯ ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರಿಗೂ ಪ್ರತಿಷ್ಠೆಯಾಗಿದೆ. ಅದಲ್ಲದೇ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರಿಗೂ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ, ಈ ಬಾರಿ ಮೂರು ಪಕ್ಷಗಳಿಂದಲೂ ಕೂಡ ಪ್ರಬಲ ಆಕಾಂಕ್ಷಿಗಳ ಪಟ್ಟಿ ಉದ್ದವಾಗಿದೆ.

ಕಳೆದ ಬಾರಿ ಆಯ್ಕೆಯಾಗಿದ್ದ, ಅಧಿಕಾರಾವಧಿ 5 ವರ್ಷ ಆಗಿದ್ದರೂ ಅಧಿಕಾರ ನಡೆಸಿದ್ದು ಎರಡು ವರ್ಷ. ಉಳಿದ ಅವಧಿಯಲ್ಲಿ ಮೀಸಲಾತಿಯ ವಿಷಯ ಕೋರ್ಟ್ ಮೆಟ್ಟಿಲೇರಿ ಗೊಂದಲ ಸೃಷ್ಟಿಯಾಗಿತ್ತು. ಗೆಲುವು ಸಾಧಿಸಿದ್ದರೂ ಅಧಿಕಾರ ಚಲಾಯಿಸಲೂ ಸಾಧ್ಯವಾಗಲಿಲ್ಲ.

‘ಐದು ವರ್ಷಗಳಿಂದ ಪುರಸಭೆಯಿಂದ ಏನೆಲ್ಲ ಅಭಿವೃದ್ಧಿ ಕೆಲಸಗಳು ಆಗಿವೆ. ಯಾವ ಪಕ್ಷ ಬಂದರೆ ಬಿಡದಿ ಪಟ್ಟಣ ಅಭಿವೃದ್ಧಿ ಸಾಧಿಸಬಹುದು’ ಎಂಬುದನ್ನು ಪಟ್ಟಣದ ನಾಗರಿಕರು ಮೌಲ್ಯ ಮಾಪನ ಮಾಡುತ್ತಿದ್ದಾರೆ.

‘ಪ್ರಸ್ತುತ ಸಾಲಿನಲ್ಲಿ ಆಡಳಿತ ನಡೆಸಿದ ಸದಸ್ಯರಿಂದ ಬಿಡದಿ ಪಟ್ಟಣವೂ ಅಭಿವೃದ್ಧಿಯಾಗಿಲ್ಲ. ಪಟ್ಟಣದ ಪ್ರಮುಖ ರಸ್ತೆಯಲ್ಲೂ ಓಡಾಡಲು ಅಸಾಧ್ಯ. ಕೋಳಿ ತ್ಯಾಜ್ಯವನ್ನು ಸಾಗಾಣಿಕೆ ಮಾಡಲು ಸ್ಥಳವಿಲ್ಲದೆ ರಸ್ತೆ ಬದಿಗಳಲ್ಲಿ ಸುರಿಯುತ್ತಿರುವುದು ಹಾಗೂ ನೀರಿನ ಅಭಾವ ಇವೆಲ್ಲಾ ವಿಫಲವಾಗಿದೆ’ ಎಂದು ಸ್ಥಳಿಯ ನಿವಾಸಿ ಎಸ್. ರೇಣುಕಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT