ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು | ಜೂಜು ಅಡ್ಡೆ ಮೇಲೆ ದಾಳಿ: ಬಂಧನ

Published 6 ಜುಲೈ 2024, 14:32 IST
Last Updated 6 ಜುಲೈ 2024, 14:32 IST
ಅಕ್ಷರ ಗಾತ್ರ

ಕುದೂರು: ಸೋಲೂರು ಹೋಬಳಿಯ ನಾಗನಹಳ್ಳಿ ಹಾಲಿನ ಡೈರಿ ಮುಂಭಾಗ ಜೂಜಾಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕುದೂರು ಪೊಲೀಸರು ದಾಳಿ ನಡೆಸಿ, ಜೂಜುಕೋರರನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ.

ಏಳು ಮಂದಿ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಕುದೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಸರ್ದಾರ್ ಸಾಬ್ ಮತ್ತು ತಂಡದವರು ದಾಳಿ ನಡೆಸಿ ಹೊಸಹಳ್ಳಿ ಗ್ರಾಮದ ರಾಮಯ್ಯ, ಗರ್ಗೇಶ್ವರಪುರದ ಗಂಗಾಧರ, ನಾಗನಹಳ್ಳಿಯ ಮಂಜುನಾಥ, ಸಿದ್ದಪ್ಪ, ಬಸವ ಪ್ರಮೋದ್, ಗಂಗಯ್ಯ ಹಾಗೂ ಗುಡೇಮಾರನಹಳ್ಳಿಯ ಕುಮಾರ್ ಅವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ₹33,600 ನಗದು ಹಣವನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT