ಕುದೂರು: ಇಲ್ಲಿನ ಗ್ರಾಮ ಪಂಚಾಯಿತಿ ಒಡೆತನದ 64 ಅಂಗಡಿಗಳ ಬಹಿರಂಗ ಹರಾಜಿಗೆ ಒಂದು ವರ್ಷ ಸಮಯಾವಕಾಶ ನೀಡುವಂತೆ ಶಾಸಕ ಬಾಲಕೃಷ್ಣ ಗ್ರಾಮ ಪಂಚಾಯಿತಿ ಪಿಡಿಒ ಪುರುಷೋತ್ತಮ್‌ಗೆ ಸೂಚಿಸಿದ್ದಾರೆ.
ಕಳೆದ ವಾರದಲ್ಲಿ ನಡೆದ ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ 14 ಸದಸ್ಯರು ಬಹಿರಂಗ ಹರಾಜಿಗೆ ಒಪ್ಪಿಗೆ ಸೂಚಿಸಿದ್ದರು. ಇದರಿಂದ ಕಂಗಾಲಾಗಿದ್ದ ಕುದೂರು ಗ್ರಾಮ ಪಂಚಾಯಿತಿ ಅಂಗಡಿಗಳ 64 ಬಾಡಿಗೆದಾರರು, ಒಟ್ಟಾಗಿ ಈಚೆಗೆ ಶಾಸಕ ಬಾಲಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅಂಗಡಿಗಳ ಹರಾಜಿಗೆ ತಡೆ ನೀಡಬೇಕೆಂದು ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಕುದೂರು ಗ್ರಾಮ ಪಂಚಾಯಿತಿ ಪಿಡಿಒ ಜೊತೆ ಶಾಸಕ ಎಚ್.ಸಿ ಬಾಲಕೃಷ್ಣ ಮಾತನಾಡಿ, ಅಂಗಡಿ ಮಳಿಗೆಗಳ ಹರಾಜಿಗೆ ಒಂದು ವರ್ಷ ಸಮಯ ನೀಡಿ, ಬಾಡಿಗೆದಾರರಿಂದ ಬರಬೇಕಾಗಿರುವ ಬಾಕಿ ಹಣವನ್ನು ಮೂರು ತಿಂಗಳ ಒಳಗಾಗಿ ಸಂದಾಯ ಮಾಡಿಸಿಕೊಳ್ಳುವಂತೆ ಶಾಸಕರು ಪಿಡಿಒ ಪುರುಷೋತ್ತಮ್ ಗೆ ತಿಳಿಸಿದ್ದಾರೆ.