ಎರಡು ಅಂತಸ್ತಿನ ಸುಸಜ್ಜಿತ ವಸತಿ ಗೃಹಗಳು
ಚನ್ನಪಟ್ಟಣದ ಯಾರಬ್ ನಗರದ ಹಿಂಭಾಗದ ಹೊನಗನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ವಸತಿ ಗೃಹ
ಚನ್ನಪಟ್ಟಣದಲ್ಲಿರುವ ಬೀಡಿ ಕಾರ್ಮಿಕರ ಕಾಲೊನಿಯ ಸದ್ಯದ ಸ್ಥಿತಿ

2026ರ ಮಾರ್ಚ್ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಾರ್ಮಿಕರು ಭರಿಸಲು ಬೇಕಾದ ಹೆಚ್ಚುವರಿ ಹಣಕ್ಕೆ ಬ್ಯಾಂಕುಗಳ ಮೊರೆ ಹೋಗಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಬೀಡಿ ಕಾರ್ಮಿಕರ ಕನಸು ಮಾರ್ಚ್‌ನಲ್ಲಿ ನನಸಾಗಲಿದೆ
– ಮಹಮದ್ ಆಲಿ ಉಪಾಧ್ಯಕ್ಷ ಬೀಡಿ ಕಾರ್ಮಿಕರ ಸಹಕಾರ ಸಂಘ ಚನ್ನಪಟ್ಟಣ
ನಮ್ಮ ಕುಟುಂಬಗಳಿಗೆ ಮನೆ ನೀಡುವ ಯೋಜನೆಯಿಂದ ಹೊಸ ಆಸೆ ಚಿಗುರಿದೆ. ಆದರೆ ಸರ್ಕಾರ ನಿಗದಿಪಡಿಸಿರುವ ₹6.60 ಲಕ್ಷ ನೀಡುವುದು ನಮಗೆ ಹೊರೆಯಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ನಮ್ಮ ಮೇಲಿನ ಹೊರೆ ಇಳಿಸಬೇಕು
– ಹಬೀದಾ ಬಾನು ಬೀಡಿ ಕಾರ್ಮಿಕರು ಚನ್ನಪಟ್ಟಣ₹6.60 ಲಕ್ಷ ಪಾವತಿಯ ಹೊರೆ
ಪ್ರಧಾನಮಂತ್ರಿ ಅವಾಸ್ ಯೋಜನೆ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ವಸತಿ ಗೃಹಗಳು ಮಂಜೂರಾಗಿ ನಿರ್ಮಾಣ ಕೆಲಸ ನಡೆಯುತ್ತಿದೆ. ಪ್ರತಿ ಮನೆಗೆ ಕೇಂದ್ರ ಸರ್ಕಾರದಿಂದ ₹1.50 ಲಕ್ಷ ಮತ್ತು ರಾಜ್ಯ ಸರ್ಕಾರದಿಂದ ₹1.20 ಲಕ್ಷ ಅನುದಾನ ದೊರೆಯುತ್ತಿದೆ. ಒಂದೊಂದು ಮನೆಗಳಿಗೆ ಸುಮಾರು ₹9.30 ಲಕ್ಷ ಖರ್ಚಾಗುತ್ತಿದೆ. ಪ್ರತಿ ಮನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುತ್ತಿರುವ ಅನುದಾನ ₹2.70 ಲಕ್ಷ ಮಾತ್ರ. ಉಳಿಕೆ ಮೊತ್ತ ₹6.60 ಲಕ್ಷವನ್ನು ಮನೆ ಪಡೆಯುವ ಪ್ರತಿ ಫಲಾನುಭವಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಭರಿಸಬೇಕು. ಆಗ ಮಾತ್ರ ಫಲಾನುಭವಿಗೆ ಮನೆ ದೊರೆಯುತ್ತದೆ. ಇದು ಬಡ ಬೀಡಿ ಕಾರ್ಮಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸರ್ಕಾರದಿಂದಲೇ ಭರಿಸಲು ಸಚಿವರಿಗೆ ಮನವಿ
ಬೀಡಿ ಕಾರ್ಮಿಕರಿಗೆ ಮನೆಗಳ ಮಂಜೂರಾತಿಯಾಗಿದ್ದರೂ ಪ್ರತಿ ಮನೆಗೆ ಖರ್ಚಾಗುವ ₹9.30 ಲಕ್ಷದಲ್ಲಿ ₹6.60 ಲಕ್ಷ ಹಣ ಕಟ್ಟಲು ಪ್ರತಿ ಕಾರ್ಮಿಕರಿಗೆ ಕಷ್ಟವಾಗುವ ಕಾರಣ ಬೀಡಿ ಕಾರ್ಮಿಕರ ಸಹಕಾರ ಸಂಘದ ಅಧ್ಯಕ್ಷ ಶಾಸಕ ಸಿ.ಪಿ. ಯೋಗೇಶ್ವರ್ ಅವರು ಸಂಘದ ಇತರ ನಿರ್ದೇಶಕರ ಜೊತೆಗೂಡಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಕಾರ್ಮಿಕರಿಗೆ ಹೊರೆಯಾಗುವ ಹೆಚ್ಚುವರಿ ₹6.60 ಲಕ್ಷ ಹಣವನ್ನು ಸರ್ಕಾರವೇ ಭರಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ನೀಡಿರುವ ಸಚಿವರು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಕಾರ್ಮಿಕರು ಪಾವತಿಸಬೇಕಾದ ಮೊತ್ತವನ್ನು ಕಡಿಮೆ ಮಾಡಿಸುವ ಭರವಸೆ ನೀಡಿದ್ದಾರೆ ಎಂದು ಸೊಸೈಟಿಯ ನಿರ್ದೇಶಕರೊಬ್ಬರು ತಿಳಿಸಿದರು.