ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ ನಗರಸಭೆ: ₹ 3.58 ಕೋಟಿ ಉಳಿತಾಯ ಬಜೆಟ್ ಮಂಡನೆ

Published 6 ಮಾರ್ಚ್ 2024, 7:14 IST
Last Updated 6 ಮಾರ್ಚ್ 2024, 7:14 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರಸಭೆಯು 2024-25ನೇ ಸಾಲಿನಲ್ಲಿ ₹3.58 ಕೋಟಿ ಉಳಿತಾಯ ಬಜೆಟ್ ಮಂಡಿಸಿದೆ.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಪಿ. ಪ್ರಶಾಂತ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಅನ್ನು ಅಧ್ಯಕ್ಷರ ಪರವಾಗಿ ಲೆಕ್ಕ ಪರೀಕ್ಷಕ ಚಂದ್ರು ಮಂಡಿಸಿದರು. ಕೆಲವು ವಿಚಾರಕ್ಕೆ ಚರ್ಚೆ ನಡೆಸಿದ ನಂತರ ಪ್ರಸಕ್ತ ಸಾಲಿನ ಬಜೆಟ್ ಗೆ ಅನುಮೋದನೆ ಪಡೆಯಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು, ತೆರಿಗೆ ಸಂಗ್ರಹಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ ಒಟ್ಟು ₹ 32.31 ಲಕ್ಷ ಆದಾಯ ನಿರೀಕ್ಷಿಸಲಾಗಿದ್ದು, ₹ 44.82 ಲಕ್ಷ ವೆಚ್ಚ ತೋರಿಸಲಾಗಿದೆ. 2024-25ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿಗಳು ₹ 43.2 ಕೋಟಿ, ರಾಜಸ್ವ ಪಾವತಿಗಳು ₹ 21.3 ಕೋಟಿ, ಬಂಡವಾಳ ಸ್ವೀಕೃತಿ ₹ 24.2 ಕೋಟಿ, ಬಂಡವಾಳ ಪಾವತಿಗಳು ₹ 53.5 ಕೋಟಿ ಎಂದು ಅಂದಾಜಿಸಲಾಗಿದೆ.

ಅಸಾಧಾರಣ ಸ್ವೀಕೃತಿಗಳು ₹ 12.7 ಕೋಟಿ, ಬಂಡವಾಳ ಪಾವತಿಗಳು ₹ 17.7 ಕೋಟಿ ಎಂದು ಅಂದಾಜು ಮಾಡಲಾಗಿದೆ. ಪ್ರಾರಂಭಿಕ ಶುಲ್ಕ ₹ 16.97 ಕೋಟಿ ಇದ್ದು, ಎಲ್ಲಾ ಖರ್ಚು ಕಳೆದು ₹ 3.58 ಕೋಟಿ ಉಳಿಕೆಯನ್ನು ತೋರಿಸಲಾಗಿದೆ.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ನಿಗಾರ್ ಬೇಗಂ, ಪೌರಾಯುಕ್ತ ಸಿ.ಪುಟ್ಟಸ್ವಾಮಿ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT