ಜಲಜೀವನ್ ಮಿಷನ್ ಯೋಜನೆ ಪೈಪ್‌ಲೈನ್‌ಗೆ ಸಂಪರ್ಕ ಕೊಟ್ಟಿರುವ ಖಾಸಗಿ ಪಂಪ್ ಸೆಟ್ ಹೌಸ್
ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಆರಂಭವಾಗಿ ಐದು ವರ್ಷ ಕಳೆದಿದ್ದರೂ ನೀರಿನ ಸಂಪರ್ಕ ಸಿಗದೆ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸಂಬಂಧಪಟ್ಟವರು ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಗ್ರಾಮಸ್ಥರ ನೀರಿನ ಸಮಸ್ಯೆ ಪರಿಹರಿಸಿ.
ಶಿವರಾಜ್ ಕುಮಾರ್ ಗ್ರಾಮಸ್ಥ
ಶೀಘ್ರ ಸರಿಪಡಿಸಿ ಪೀಹಳ್ಳಿದೊಡ್ಡಿ ಸರ್ಕಾರದ ಅನುದಾನ ಸದ್ಬಳಕೆಯಾಗಲಿ ಮನೆ ಮನೆಗೆ ನೀರು ನೀಡುತ್ತೇವೆ ಎನ್ನುವ ಸರ್ಕಾರ ಯೋಜನೆಯನ್ನು ಆರಂಭಿಸಿ ಈ ರೀತಿ ಅರ್ಧಕ್ಕೆ ನಿಲ್ಲಿಸುವುದು ಸೂಕ್ತವಲ್ಲ. ಎಲ್ಲವೂ ಪೂರ್ಣಗೊಂಡಿದ್ದರೂ ನೀರು ಸಂಪರ್ಕ ನೀಡಿಲ್ಲ ಎಂದರೆ ಇದು ಸರ್ಕಾರದ ಅನುದಾನದ ದುರುಪಯೋಗವೇ ಸರಿ. ಶೀಘ್ರ ಹೊಸ ಕೊಳವೆಬಾವಿ ಕೊರೆಸಿ ಅದರಿಂದ ಓವರ್ ಹೆಡ್‌ಟ್ಯಾಂಕ್‌ಗೆ ನೀರಿನ ಸಂಪರ್ಕ ನೀಡಿ ಸಮಸ್ಯೆ ಪರಿಹರಿಸಲಿ