ಮಾಗಡಿ : ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟಿಕ್ ಬೈಕ್ ನಲ್ಲಿ ಬೆಂಕಿ ಹೊತ್ತಿ ಉರಿದಿದ ಘಟನೆ ಮಾಗಡಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕಲ್ಯಾಗೇಟ್ ಜಡೆದೇವ ಮಠದ ಮುಖ್ಯರಸ್ತೆಯ ಲಕ್ಷ್ಮಿ ನರಸಿಂಹ ಎಂಬುವರು ಭಾನುವಾರ ಮುಂಜಾನೆ ತಮ್ಮ ಎಲೆಕ್ಟಿಕ್ ಬೈಕ್ ಗೆ ಚಾರ್ಜ್ ಹಾಕಿ ಮಲ್ಲಗಿದ್ದಾರೆ. ಚಾರ್ಜ್ ಹಾಕಿ ಒಂದು ಗಂಟೆಯ ನಂತರ ಸುಟ್ಟ ವಾಸನೆ ಬಂದಿದ್ದು, ಎದ್ದು ನೋಡುವಷ್ಟರಲ್ಲಿ ಬೆಂಕಿ ಕಾಣಿಸಿದೆ.

ಬೆಂಕಿಯನ್ನು ನಂದಿಸಲು ಸಾಕಷ್ಟು ಪ್ರಯತ್ನಿಸಿದರು ಸಾಧ್ಯವಾಗದ ವೇಳೆ ಸ್ಥಳಿಯರು ಬೈಕ್ ಮಾಲೀಕ ಉರಿಯುತ್ತಿದ್ದ ಬೈಕನ್ನು ಮನೆಯ ಹೊರಗೆ ಹಾಕಿ ನಂದಿಸಿದ್ದಾರೆ ಈ ವೇಳೆ ಬೈಕ್ ಮಾಲೀಕರ ಕೈ, ಕಾಲು, ಮುಖದ ಭಾಗಕ್ಕೆ ಬೆಂಕಿ ತಗುಲಿದೆ.

ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮನೆಯಲ್ಲಿದ್ದ ವಾಶಿಂಗ್ ಮಿಷನ್, ಯೂಪಿಎಸ್ ಸೇರಿದಂತೆ ಪಿಠೋಪಕರಣಗಳು ಸಂಪೂರ್ಣ ನಾಶವಾಗಿದೆ

ಸ್ಥಳೀಯರ ಸಹಾಯದಿಂದ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಲಕ್ಷ್ಮಿನರಸಿಂಹ ಅವರು ಮನೆಯಲ್ಲಿ 2 ಮಗ್ಗ ಹಾಕಿಕೊಂಡು ಬಟ್ಟೆ ನೇಯ್ದು ಜೀವನ ನಡೆಸುತ್ತಿದ್ದು ಇತ್ತಿಚಿಗೆ ಬೈಕ್ ತೆಗೆದುಕೊಂಡಿದ್ದರು. ಬೈಕ್ ನಲ್ಲಿ ಬೆಂಕಿ ಹೊತ್ತು ಉರಿದು ಮನೆಯಲ್ಲಾ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ನರಸಿಂಹ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.