ಶನಿವಾರ, ಆಗಸ್ಟ್ 13, 2022
26 °C

ಟೊಯೊಟಾ ಕಾರ್ಮಿಕರಿಂದ ‘ಛತ್ರಿ ಚಳವಳಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಕಾರ್ಮಿಕರು ಹಾಕಿದ್ದ ಪೆಂಡಾಲ್‌ ತೆರವುಗೊಳಿಸಿದ್ದನ್ನು ಖಂಡಿಸಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿ ನೌಕರರು ಶುಕ್ರವಾರ ‘ಛತ್ರಿ ಚಳವಳಿ’ ಮೂಲಕ ತಮ್ಮ ಪ್ರತಿಭಟನೆ
ಮುಂದುವರಿಸಿದರು.

ಟೊಯೊಟಾ ಕಂಪನಿಯ ಪ್ರವೇಶ ದ್ವಾರದ ಮುಂಭಾಗ ಬೇರೆ ಕಂಪನಿಯೊಂದಕ್ಕೆ ಸೇರಿದ ಖಾಲಿ ಜಾಗದಲ್ಲಿ ಕಾರ್ಮಿಕರು ಪೆಂಡಾಲ್‌ ಹಾಕಿ ತಿಂಗಳಿನಿಂದ ಪ್ರತಿಭಟನೆ ನಡೆಸಿದ್ದರು. ಕೈಗಾರಿಕೆ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಕ್ಕೆ ಕಾರಣ ಕೇಳಿ ಕೆಐಎಡಿಬಿಯು ಸಂಬಂಧಿಸಿದ ಕಂಪನಿ ಮಾಲೀಕರಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಆ ಕಂಪನಿಯ ಮಾಲೀಕರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ಗುರುವಾರ ಸಂಜೆ ಪ್ರತಿಭಟನೆ ಸ್ಥಳದಲ್ಲಿ ಇದ್ದ ಪೆಂಡಾಲ್ ಅನ್ನು ತೆರವುಗೊಳಿಸಿದ್ದರು.

ಪ್ರತಿಭಟನೆಯ 33ನೇ ದಿನವಾದ ಶುಕ್ರವಾರ ಪ್ರತಿಭಟನಾಕಾರರು ಅದೇ ಜಾಗದಲ್ಲಿ ಕೈಯಲ್ಲಿ ಛತ್ರಿಗಳನ್ನು ಹಿಡಿದು ಕಂಪನಿ ವಿರುದ್ಧ ಧಿಕ್ಕಾರ ಕೂಗಿದರು. ‘ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಲು ಕಂಪನಿಯ ಆಡಳಿತ ಮಂಡಳಿಯು ವಾಮ ಮಾರ್ಗಗಳನ್ನು ಅನುಸರಿಸುತ್ತಿದೆ. ಬೇಕೆಂತಲೇ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪೆಂಡಾಲ್‌ ತೆರವುಗೊಳಿಸಲಾಗಿದೆ. ಇದ್ಯಾವುದಕ್ಕೂ ಕಾರ್ಮಿಕರು ಬಗ್ಗುವುದಿಲ್ಲ. ಹೋರಾಟ ಮುಂದುವರಿಸುತ್ತೇವೆ’ ಎಂದು ಕಾರ್ಮಿಕ ಸಂಘದ ಮುಖಂಡರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು