ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಮುಚ್ಚಿದ ಎಸ್‌ಬಿಐ ಶಾಖೆ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಪಟ್ಟಣದಲ್ಲಿ 2 ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶಾಖೆಗಳು ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದ್ದವು. ಏಕಾಏಕಿ ಒಂದು ಶಾಖೆಯನ್ನು ಮುಚ್ಚಿರುವುದರಿಂದ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ ಎಂದು ಕೃಷಿಕ ಸಮಾಜದ ನವದೆಹಲಿಯ ಪ್ರತಿನಿಧಿ ಬೆಳಗವಾಡಿ ಸತೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಮುಖ್ಯರಸ್ತೆಯಲ್ಲಿದ್ದ ಎಸ್‌ಬಿಐ ಶಾಖೆಯನ್ನು ಮುಚ್ಚಿ ದಾಖಲಾತಿಗಳನ್ನು ಕೆಂಪೇಗೌಡ ಸರ್ಕಲ್‌ ಬಳಿ ಇರುವ ಮತ್ತೊಂದು ಶಾಖೆಗೆ ಸಾಗಿಸಲಾಗುತ್ತಿದೆ ಎಂದು ಅವರು ಆಕ್ಷೇಪ ಸೂಚಿಸಿದರು.

ಮೇಲಧಿಕಾರಿಗಳನ್ನು ಕಂಡು ಗ್ರಾಹಕರಿಗೆ ಆಗಿರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಮೊದಲಿದ್ದಂತೆ ಎರಡು ಶಾಖೆಗಳಲ್ಲಿ ಗ್ರಾಹಕರಿಗೆ, ರೈತರಿಗೆ ಸೇವೆ ಒದಗಿಸುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.

‘ಬ್ಯಾಂಕಿನ ಶಾಖೆಯ ಒಳಗೆ ಚಿತ್ರ ತೆಗೆಯುವುದು ಅಪರಾಧ. ಮೇಲಧಿಕಾರಿಗಳ ಆದೇಶದಂತೆ 2 ಶಾಖೆಗಳ ಬದಲು ಒಂದೇ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಲಾಗುವುದು’ ಎಂದು ಹೆಸರು ಹೇಳಲು ಇಚ್ಛಿಸದ ವ್ಯವಸ್ಥಾಪಕಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು