ರಾಮನಗರ: ಪರಿಶಿಷ್ಟ ಸಮುದಾಯದ ಜಾತಿಪಟ್ಟಿಯಲ್ಲಿರುವ ಕೊರಮ, ಕೊರಚ, ಲಂಬಾಣಿ ಹಾಗೂ ಭೋವಿ (ಕೋಲಂಬೊ) ಸಮುದಾಯಗಳ ಜನಸಂಖ್ಯೆ ಎಡಗೈ ಮತ್ತು ಬಲಗೈ ಜಾತಿಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ. ಹಾಗಾಗಿ, ಈ ಸಮುದಾಯಗಳಿಗೆ ಶೇ 7 ಒಳ ಮೀಸಲಾತಿ ನೀಡಬೇಕು ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನದಾಸ್ ವರದಿಯಲ್ಲಿ ಕೋಲಂಬೊ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಧನಂಜಯ ನಾಯಕ್, ‘ಕೋಲಂಬೊ ಸಮುದಾಯಗಳು ಜನಸಂಖ್ಯೆಯಲ್ಲಿ ಹೆಚ್ಚಾಗಿದ್ದರೂ ಹಿಂದುಳಿದಿವೆ. ಹೀಗಿದ್ದರೂ ಕೋಲಂಬೊ ಜೊತೆಗೆ ಸೌಲಭ್ಯ ವಂಚಿತ ಇತರ 59 ಜಾತಿಗಳನ್ನು ಸೇರಿಸಿ ಶೇ 5 ಒಳ ಮೀಸಲಾತಿ ನಿಗದಿಪಡಿಸಲಾಗಿದೆ. ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಬೇಕಾದರೆ ಶೇ 7 ಮೀಸಲಾತಿ ನೀಡಬೇಕು’ ಎಂದರು.

‘ಎಸ್ಸಿ ಮೀಸಲಾತಿಯನ್ನು ಶೇ 17ಕ್ಕೆ ಏರಿಕೆ ಮಾಡಿರುವ ರಾಜ್ಯ ಸರ್ಕಾರ, ಒಳ ಮೀಸಲಾತಿಗಾಗಿ ಮೂರು ಪ್ರವರ್ಗಗಳನ್ನು ಸೃಷ್ಟಿಸಿ 6:6:5 ಅನುಪಾತದಲ್ಲಿ ಮೀಸಲಾತಿ ಹಂಚಿಕೆ ಮಾಡಿದೆ. ಶೇ 17 ಮೀಸಲಾತಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ಇದೆಯೇ ಎಂಬುದು ಸ್ಪಷ್ಟವಾಗಬೇಕು. ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇಲ್ಲವಾದರೂ ಅದನ್ನು ಮಾಡಲಾಗಿದೆ’ ಎಂದು ತಿಳಿಸಿದರು.

‘ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂಬ ಪದ ಬಳಕೆ ಕಾನೂನುಬಾಹಿರವೆಂದು ಸುಪ್ರೀಂಕೋರ್ಟ್ ಹೇಳಿದ್ದರೂ, ವರದಿಯಲ್ಲಿ ಬಳಸಲಾಗಿದೆ. ಇದನ್ನು ಸರ್ಕಾರ ಹಿಂಪಡೆಯಬೇಕು. ಆಯೋಗ ಸರಿಯಾಗಿ ಜಾತಿಗಣತಿ ನಡೆಸದಿರುವುದರಿಂದ ವರದಿ ದೋಷಪೂರಿತವಾಗಿದೆ. ಹಾಗಾಗಿ, ತರಾತುರಿಯಲ್ಲಿ ಒಳ ಮೀಸಲಾತಿ ಜಾರಿಗೆ ತರದೆ ವಿಧಾನಸಭೆ ಮತ್ತು ಪರಿಷತ್ನಲ್ಲಿ ಚರ್ಚಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಸಿದ್ಯಾ ನಾಯಕ್, ಮುಖಂಡರಾದ ಕೃಷ್ಣ ನಾಯಕ್, ಪರಶುರಾಮ್, ಬಾಲು ನಾಯಕ್, ಶಿವರಾಮ್ ನಾಯಕ್, ಸಿದ್ದರಾಜು ನಾಯಕ್, ತುಳಸಿ ರಾಮನಾಯಕ್, ಗೋವಿಂದ ನಾಯಕ್, ನಾಗೇಂದ್ರ ನಾಯಕ್, ಕೃಷ್ಣ ನಾಯಕ್, ರಾಮಚಂದ್ರ ನಾಯಕ್, ಆರ್.ಬಿ. ಶ್ರೀಧರ್ ಹಾಗೂ ಇತರರು ಇದ್ದರು.

‘ಕಾಣದ ಕೈಗಳಿಂದ ಒಗ್ಗಟ್ಟು ಒಡೆಯುವ ಪ್ರಯತ್ನ’

‘ಶೂದ್ರ ಮತ್ತು ದಲಿತ ಸಮುದಾಯಗಳ ಒಗ್ಗಟ್ಟು ಒಡೆಯಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ. ನಮ್ಮವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸ್ಪೃಶ್ಯ ಜಾತಿಗಳೆಂದು ಉಲ್ಲೇಖಿಸಿರುವುದರ ಹಿಂದೆ 63 ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡುವ ಹುನ್ನಾರವಿದೆ. ಕೋಲಂಬೊ ಜಾತಿಗಳನ್ನು ಒಬಿಸಿಗೆ ಸೇರಿಸುವ ಆತಂಕವೂ ಇದೆ. ಈಗಾಗಲೇ ಬೇಡ ಮತ್ತು ಜಂಗಮ ಸಮುದಾಯವನ್ನು ನಮ್ಮೊಂದಿಗೆ ಸೇರಿಸಿದ್ದಾರೆ. ಜಂಗಮ ಬಲಿಷ್ಠ ಲಿಂಗಾಯತ ಸಮುದಾಯವಾಗಿದ್ದು ಎಲ್ಲಾ ಹಂತದಲ್ಲಿಯೂ ನಮ್ಮನ್ನು ತುಳಿದು ಲಾಭ ಪಡೆಯುತ್ತದೆ. ಹಾಗಾಗಿ ರಾಜ್ಯ ಸರ್ಕಾರ ನ್ಯಾ. ನಾಗಮೋಹನ್ ದಾಸ್ ವರದಿ ಜಾರಿಗೆ ಮುಂದಾಗದೆ ಮರು ಪರಿಶೀಲಿಸಬೇಕು’ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಡಾ. ಎ.ಆರ್. ಗೋವಿಂದಸ್ವಾಮಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.