ಸೋಮವಾರ, ಮೇ 23, 2022
27 °C

ಮಗಳ ಮದುವೆ: ಕ್ಷೇತ್ರದ ಜನರಿಗೆ ಸೀರೆ, ಬಟ್ಟೆ ಉಡುಗೊರೆ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಕ್ಷೇತ್ರದ ಜನರಿಗೆ ಬಟ್ಟೆ ಮತ್ತು ಸೀರೆ ಉಡುಗೊರೆ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಗಳ ಮದುವೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. 

ಕ್ಷೇತ್ರದ ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಮಗಳ ಮದುವೆ ಮಾಡಬೇಕು ಎಂದು ಕನಸು ಕಂಡಿದ್ದ ಶಿವಕುಮಾರ್‌ ಅವರು ಕೊರೊನಾ ಕಾರಣದಿಂದಾಗಿ ಕ್ಷೇತ್ರದ ಜನರನ್ನು ವಿವಾಹಕ್ಕೆ ಆಹ್ವಾನಿಸಲು ಸಾಧ್ಯವಾಗಿರಲಿಲ್ಲ.  

ಹಾಗಾಗಿ ತಮ್ಮ ಇಚ್ಛೆಯಂತೆ ಕ್ಷೇತ್ರದ ಪ್ರತಿಯೊಂದು ಮನೆಗೂ ಸೀರೆ ಮತ್ತು ಬಟ್ಟೆ ಉಡುಗೊರೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಜನರ ಮನೆಗೆ ಸೀರೆ ಮತ್ತು ಬಟ್ಟೆಯ ಜತೆಗೆ ಒಂದು ಸ್ವೀಟ್‌ ಬಾಕ್ಸ್‌ ಕಾಣಿಕೆಯಾಗಿ ಕೊಟ್ಟಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಮೊಮ್ಮಗ ಹಾಗೂ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮಾರ್ತ್ಯ ಅವರೊಂದಿಗೆ ಭಾನುವಾರ ಡಿ.ಕೆ. ಶಿವಕುಮಾರ್ ಅವರ ಪುತ್ರಿಯ ವಿವಾಹ ನೆರವೇರಿದೆ. 

PHOTOS: ಪ್ರೇಮಿಗಳ ದಿನದಂದು ಡಿಕೆಶಿ ಪುತ್ರಿ ಐಶ್ವರ್ಯಾ- ಅಮರ್ತ್ಯ ಹೆಗ್ಡೆ ಮದುವೆ ಸಂಭ್ರಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು