ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈತ್ರಿ ತೆಕ್ಕೆಗೆ ನಾಗೋಹಳ್ಳಿ ಹಾಲು ಉತ್ಪಾದಕರ ಸಂಘ

Published 17 ಜೂನ್ 2024, 6:04 IST
Last Updated 17 ಜೂನ್ 2024, 6:04 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ನಾಗೋಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ 8 ಅಭ್ಯರ್ಥಿಗಳು ಆಯ್ಕೆಯಾಗಿದೆ. ಇದರೊಂದಿಗೆ ಸಂಘದ ಆಡಳಿತ ಚುಕ್ಕಾಣಿ ಮೈತ್ರಿಕೂಟದ ಪಾಲಾಗಿದೆ.

ಸಂಘದ 10 ನಿರ್ದೇಶಕರ ಸ್ಥಾನಗಳಿಗೆ ಮತದಾನ ನಡೆಯಿತು. ಆ ಪೈಕಿ 8 ಸ್ಥಾನಗಳಿಗೆ ಜೆಡಿಎಸ್– ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಪ್ಪಾಜಿ, ವಿ. ನಾರಾಯಣ, ಎನ್.ಎಸ್. ರವಿ, ಎನ್.ಎಚ್. ಲಕ್ಷ್ಮೀಕಾಂತ, ಎನ್.ಎಸ್. ಲಿಂಗೇಗೌಡ, ಎನ್.ಪಿ. ಸತೀಶ, ವೆಂಕಟಗಿರಿಗೌಡ ಹಾಗೂ ಕಲ್ಪನಾ ಜಯಶಾಲಿಗಳಾದರು. ಉಳಿದೆರಡು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ನಾಗೇಶ್ ಕಾರ್ಯನಿರ್ವಹಿಸಿದರು.

ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಜೆಡಿಎಸ್ ಮುಖಂಡ ಸಬ್ಬಕೆರೆ ಶಿವಲಿಂಗಯ್ಯ, ‘ನಾಗೋಹಳ್ಳಿ ಹಾಲು ಉತ್ಪಾದಕ ಸಂಘದ ಸದಸ್ಯರು ರೈತರ ಪರವಾಗಿ ಹಾಗೂ ಸಂಘದ ಶ್ರೇಯೋಭಿವೃದ್ಧಿಗೆ ದುಡಿಯುವ ಅಭ್ಯರ್ಥಿಗಳನ್ನು ಆರಿಸಿದ್ದಾರೆ. ಸಂಘ ಪ್ರಗತಿಯತ್ತ ಸಾಗಿದ್ದು, ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಈ ನಿಟ್ಟಿನಲ್ಲಿ ನೂತನ ನಿರ್ದೇಶಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಸಹೆ ನೀಡಿದರು.

ಮುಖಂಡ ಕೆಂಪಣ್ಣ ಮಾತನಾಡಿ, ‘ಹೈನುಗಾರಿಕೆ ಜನರ ಕೈ ಹಿಡಿದಿದೆ. ಸ್ಥಳೀಯ ರೈತರ ಜೀವನಮಟ್ಟ ಮತ್ತು ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಸಂಜೀವಿನಿಯಾಗಿದೆ. ನೂತನ ಸದಸ್ಯರು ಒಕ್ಕೂಟದ ಪ್ರಯೋಜನಗಳನ್ನು ಕಾಲಕಾಲಕ್ಕೆ ಹಾಲು ಉತ್ಪಾದಕರಿಗೆ ತಲುಪಿಸಿ, ಸಂಘದ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದರು.

ಮುಖಂಡರಾದ ಪಾಂಡುರಂಗ, ಮಹೇಶ್, ಜಿ.ಪಿ. ಗಿರೀಶ್ ವಾಸು, ವಿಎಸ್‍ಎಸ್‍ಎನ್ ಅಧ್ಯಕ್ಷ ನಾಗರಾಜು, ರವಿ, ಎಲೇಕೇರಿ ಸುರೇಶ್, ಚಂದ್ರು, ವೆಂಕಟರೇವಣ್ಣ, ದಿಲೀಪ್‍ಕುಮಾರ್, ವೆಂಕಟರಾಜ್, ಎನ್.ಎಸ್. ದೀಪಕ್, ಧನಂಜಯ, ಸಿದ್ದರಾಮಯ್ಯ, ಕೆಂಪರಾಜು, ರಮೇಶ್, ಮಾಧು, ಗೋವಿಂದರಾಜು, ಸಂಘದ ಕಾರ್ಯದರ್ಶಿ ಮಧುಸೂಧನ್, ಸಿಬ್ಬಂದಿ ಸೋಮಶೇಖರ್ ಹಾಗೂ ದೇವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT