ಕನಕಪುರ: ಮಂಡ್ಯ ಹೆದ್ದಾರಿನಲ್ಲಿ ಕಾರು ಡಿವೈಡರ್ಗೆ ಹೊಡೆದು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಶಿವನಹಳ್ಳಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ನಾಗೇಶ್ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ, ಮಗಳು ಹಾಗೂ ಜತೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.

ನಾಗೇಶ್ ಅವರು ಭಾನುವಾರ ಮೇಲುಕೋಟೆಯಲ್ಲಿದ್ದ ಸಂಬಂಧಿಕರ ಮದುವೆಗೆ ಹೋಗಿ ಕನಕಪುರಕ್ಕೆ ಹಿಂತಿರುಗುವಾಗ ಮಂಡ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ನಾಗೇಶಗ ಪತ್ನಿ ನೀಲಮ್ಮ ಈ ಘಟನೆಯಿಂದ ಪ್ರಜ್ಞೆ ಕಳೆದುಕೊಂಡಿದ್ದು, ಕೋಮಾದಲ್ಲಿದ್ದಾರೆ. ನಾಗೇಶ್ ಮಗಳು ಹಾಗೂ ಇಬ್ಬರೂ ಸ್ನೇಹಿತರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಗೇಶ್ ಮೃತಪಟ್ಟಿರುವ ವಿಚಾರ ತಿಳಿದ ಅವರ ಚಿಕ್ಕಮ್ಮ ಶಿವನಹಳ್ಳಿ ಶಿವರುದ್ರಮ್ಮ (63) ಹೃದಯಾಘಾತದಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ.

ನಾಗೇಶ್ ಮತ್ತು ಶಿವರುದ್ರಮ್ಮ ಅವರ ಅಂತ್ಯಸಂಸ್ಕಾರ ಶಿವನಹಳ್ಳಿ ಗ್ರಾಮದಲ್ಲಿ ಸೋಮವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.