ಬಿಡದಿ (ರಾಮನಗರ): ‘ಅಂಗವಿಕಲರ ಬಗ್ಗೆ ಅನುಕಂಪ ತೋರುವ ಬದಲು ಅವರಿಗೂ ಸಮಾನ ಅವಕಾಶಗಳನ್ನು ನೀಡಿ ಸ್ವಾಭಿಮಾನದಿಂದ ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಬೇಕು’ ಎಂದು ಮಾಜಿ ಶಾಸಕ ಹಾಗೂ ಎ. ಮಂಜು ಚಾರಿಟೇಬಲ್ ಟ್ರಸ್ಟ್ ಎ. ಮಂಜುನಾಥ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಿಡದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಎ. ಮಂಜು ಚಾರಿಟೇಬಲ್ ಟ್ರಸ್ಟ್ ಹಾಗೂ ಬಿಡದಿ ಹೋಬಳಿ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಫೌಂಡೇಷನ್ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ವಿಶೇಷ ಚೇತನರ ಶಾಲಾ ಸಿದ್ಧತಾ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿಗೂ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಭಾಗವಹಿಸುವಿಕೆಯಲ್ಲಿ ಅಂಗವಿಕಲರು ಹಲವು ಅಡೆತಡೆಗಳನ್ನು ಎದುರಿಸುವಂತಾಗಿದೆ. ಅವರ ಬಗ್ಗೆ ಸಮಾಜ ಹೊಂದಿರುವ ದೃಷ್ಠಿಕೋನ ಬದಲಾಗಬೇಕಿದೆ. ಅವರನ್ನು ಕೇವಲ ಸಮಸ್ಯೆಯಾಗಿ ನೋಡದೆ ಅವಕಾಶಗಳ ಸೃಷ್ಠಿಕರ್ತರಾಗಿ ಕಾಣಬೇಕು’ ಎಂದರು.

‘ಅಂಗವಿಕಲರ ಸಬಲೀಕರಣಕ್ಕೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವಕಾಶಗಳನ್ನು ಒದಗಿಸಬೇಕು. ಅಂಗವಿಕಲರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ ಒಳಗೊಳ್ಳುವುದಕ್ಕಾಗಿ ನನ್ನ ಅವಧಿಯಲ್ಲಿ ವಿಶೇಷ ಚೇತನರ ಶಾಲಾ ಸಿದ್ಧತಾ ಕೇಂದ್ರ ತೆರೆಯಲಾಯಿತು’ ಎಂದು ತಿಳಿಸಿದರು.

‘ಆರಂಭದಲ್ಲಿ ಕೇವಲ ಆರೇಳು ಸಂಖ್ಯೆಯಲ್ಲಿದ್ದ ಅಂಗವಿಕಲ ಮಕ್ಕಳ ಸಂಖ್ಯೆ ಇಂದು 50 ದಾಟಿದೆ. ಪೋಷಕರ ಸಹಕಾರದಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಮಕ್ಕಳ ಪ್ರತಿಭೆ ಗುರುತಿಸಿ ವೇದಿಕೆ ಒದಗಿಸಲಾಗುತ್ತಿದೆ. ಇಲ್ಲಿನ ಮಕ್ಕಳಿಗೆ ಪಿಜಿಯೋಥೆರಪಿ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯ ಸಲಕರಣೆಗಳು, ಕಿವಿಗೆ ಸಾಧನ, ಮ್ಯೂಸಿಕಲ್ ಪರಿಕರ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ’ ಎಂದರು.

ತ್ಯಾಗರಾಜ ಸೆಂಟ್ರಲ್ ಶಾಲೆ ಸಿಇಒ ಸಂದೀಪ್ ಮಾತನಾಡಿ, ‘ಸರಿಯಾದ ಚಿಕಿತ್ಸೆ ಹಾಗೂ ಔಷಧೋಪಚಾರ ಪಡೆಯದ ಕಾರಣದಿಂದ ಹುಟ್ಟುವಾಗಲೇ ಮಕ್ಕಳಲ್ಲಿ ಅಂಗವಿಕಲತೆಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಗರ್ಭಿಣಿಯರು ಸಕಾಲದಲ್ಲಿ ಔಷದೋಪಚಾರಗಳನ್ನು ತೆಗೆದುಕೊಳ್ಳಬೇಕು. ನಮ್ಮ ಸಂಸ್ಥೆ ವತಿಯಿಂದ ಮಕ್ಕಳಿಗೆ ಶೀಘ್ರ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಕರೆದೊಯ್ಯಲಾಗುವುದು’ ಎಂದು ಹೇಳಿದರು. ಅರ್ಚಕ ರಂಗನಾಥ್ ಮಾತನಾಡಿದರು.

ಶಾಲಾ ಸಿದ್ಧತಾ ಕೇಂದ್ರದಲ್ಲಿ ಥೆರಪಿ ಚಿಕಿತ್ಸೆ ಪಡೆದು ಎಸ್ಎಸ್ಎಲ್ಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿನಿ ನವ್ಯ ಅವರಿಗೆ ಗಣ್ಯರು ಸನ್ಮಾನಿಸಿದರು. ಬಿಇಎಸ್ ಫಾರ್ಮಸಿ ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ಕೇಂದ್ರದ ಮಕ್ಕಳಿಗೆ ಬೆಡ್ಶಿಟ್ ಹಾಗೂ ದೃಷ್ಟಿ ದೋಷವಿರುವ ಮಕ್ಕಳಿಗೆ ಟ್ರಸ್ಟ್ನಿಂದ ಕನ್ನಡಕ ವಿತರಿಸಲಾಯಿತು.

ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯ ಸಂಪತ್, ಉಪಾಧ್ಯಕ್ಷೆ ಆಯಿಷಾ ಖಲೀಲ್, ಸದಸ್ಯರಾದ ಹರಿಪ್ರಸಾದ್, ಎಚ್. ನಾಗರಾಜು, ಕೆ.ಎನ್. ರಮೇಶ್, ಬಿಡದಿ ಹೋಬಳಿ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಫೌಂಡೇಶನ್ ಅಧ್ಯಕ್ಷ ಮಂಜುನಾಥ್, ಪ್ರೌಢಶಾಲೆ ಮುಖ್ಯಶಿಕ್ಷಕಿ ಸುಚಿತ್ರ, ಕೇಂದ್ರದ ಮುಖ್ಯಸ್ಥ ದುಂಡುಮಾದಯ್ಯ, ತರಬೇತಿ ಶಿಕ್ಷಕಿ ಶೋಭಾ, ಕಿರಣ್ಕುಮಾರ್, ಅನಿಲ್, ಎಚ್.ವಿ. ಮಂಜುನಾಥ್, ಮುಖಂಡರಾದ ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ವಾಲಿ ರಮೇಶ್, ಲೋಕೇಶ್ ಹಾಗೂ ಇತರರು ಇದ್ದರು.

ಅಂಗವಿಕಲ ಮಕ್ಕಳ ಪಾಲಿಗೆ ನಂದಾದೀಪವಾಗಿರುವ ಬಿಡದಿಯ ವಿಶೇಷ ಚೇತನರ ಶಾಲಾ ಸಿದ್ಧತಾ ಕೇಂದ್ರದಲ್ಲಿ ಸ್ಪೀಚ್ ತರಬೇತಿ ಆರಂಭಿಸಲು ಶೀಘ್ರವೇ ಕ್ರಮ ವಹಿಸಲಾಗುವುದು
– ಎ. ಮಂಜುನಾಥ್ ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.