ಸೋಮವಾರ, ಮಾರ್ಚ್ 1, 2021
31 °C

ರಾಮನಗರ: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಾಲ್ಲೂಕಿನ ನಿಜಿಯಪ್ಪನದೊಡ್ಡಿ ಗ್ರಾಮದಲ್ಲಿ ಬುಧವಾರ ವಿದ್ಯುತ್ ಸ್ಪರ್ಶದಿಂದಾಗಿ ಇಬ್ಬರು ಮೃತಪಟ್ಟರು.

ನಿಜಿಯಪ್ಪನದೊಡ್ಡಿ ರೈತ ರಾಮು (50) ಹಾಗೂ ರಾಮನಗರದ ಕೊತ್ತೀಪುರ ನಿವಾಸಿ ಚಂದ್ರು (40) ಮೃತರು. ಈ ಇಬ್ಬರು ಸೇರಿ ಗ್ರಾಮದ ಮಧ್ಯಾಹ್ನ 2.30ರ ವೇಳೆಗೆ ಹೊಲದಲ್ಲಿನ ಬೋರ್ ವೆಲ್ ಮೋಟಾರ್ ದುರಸ್ತಿ ಕಾಮಗಾರಿ ಕೈಗೊಂಡಿದ್ದರು. ಈ ಸಂದರ್ಭ ಕೊಳವೆ ಬಾವಿಯ ಪೈಪ್‌ಗೆ 11 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ತಂತಿ ತಗುಲಿತು. ಮೋಟಾರ್‌ ದುರಸ್ತಿ ವಾಹನಕ್ಕೂ ವಿದ್ಯುತ್ ಪ್ರವಹಿಸಿದ್ದು, ಅದನ್ನು ಸ್ಪರ್ಶಿಸಿ ಇಬ್ಬರೂ ವಿದ್ಯುತ್‌ ಆಘಾತದಿಂದ ಮೃತಪಟ್ಟರು. ದುರಸ್ತಿ ವಾಹನಕ್ಕೂ ಬೆಂಕಿ ತಗುಲಿತು.

ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವಗಳ ಮುಂದೆ ಎರಡೂ ಕುಟುಂಬದವರ ಆಕ್ರಂದನ ಮನ ಕಲಕುವಂತೆ ಇತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು