ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ರಾಣಗೊಂಡಿದ್ದ ಕಾಡಾನೆ ಸಾವು

ಚಯಾಪಚಯ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದ 15 ವರ್ಷದ ಗಂಡಾನೆ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ನೀರಿಲ್ಲದೆ ನಿತ್ರಾಣಗೊಂಡಿದ್ದ 15 ವರ್ಷದ ಗಂಡಾನೆಯು ಕೋಡಿಹಳ್ಳಿ ಪ್ರಾದೇಶಿಕ ವಲಯದ ಗರಳಾಪುರ ಗಸ್ತಿನ ಬೆಟ್ಟಹಳ್ಳಿ ವಾಡೆ ಸಿ.ಬ್ಲಾಕ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದೆ.

ಬೆಟ್ಟಹಳ್ಳಿ ವಾಡೆ ಚನ್ನೇಗೌಡ ಅವರ ಜಮೀನಿನಲ್ಲಿ ನೀರಿಲ್ಲದೆ ನಿತ್ರಾಣಗೊಂಡಿದ್ದ ಗಂಡಾನೆಯು, ಏಪ್ರಿಲ್ 5ರಂದು ಸಣ್ಣ ಕಂದಕದಲ್ಲಿ ಪತ್ತೆಯಾಗಿತ್ತು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ನೀರು ಮತ್ತು ಮೇವು ಒದಗಿಸಿ, ಪಶು ವೈದ್ಯಾಧಿಕಾರಿಗಳನ್ನು ಕರೆಯಿಸಿ ಶುಶ್ರೂಷೆ ಮಾಡಿಸಿ ಬನ್ನೇರುಘಟ್ಟ ಅರಣ್ಯಪ್ರದೇಶಕ್ಕೆ ಓಡಿಸಿದ್ದರು. ಅದಾದ ಮೂರು ದಿಗಳಲ್ಲೇ ಆನೆಯು ಮೃತಪಟ್ಟಿದೆ.

‘ಅರಣ್ಯಕ್ಕೆ ಮರಳಿದ್ದ ಆನೆ ಚಲನವಲನ ಕುರಿತು ನಿಗಾ ವಹಿಸುವಂತೆ ಅರಣ್ಯಾಧಿಕಾರಿಗಳು ಸಿಬ್ಬಂದಿಗೆ ಸೂಚಿಸಿದ್ದರು. ಅದರಂತೆ ಸಿಬ್ಬಂದಿ ಭಾನುವಾರ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದಾಗ ನಿತ್ರಾಣಗೊಂಡಿದ್ದ ಆನೆಯು ಮೃತಪಟ್ಟಿರುವುದು ಗೊತ್ತಾಯಿತು’ ಎಂದು ಡಿಸಿಎಫ್ ರಾಮಕೃಷ್ಣಯ್ಯ ತಿಳಿಸಿದರು.

ಅನಾರೋಗ್ಯ: ಕಾಡಾನೆ 'ಮಖ್ನಾ' ಸಾವು

ಕನಕಪುರ: ಅನಾರೋಗ್ಯದಿಂದಾಗಿ ತಾಲ್ಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೋಡಿಹಳ್ಳಿ ಉಪ ವಲಯದ ಯಲವನಾಥ ಗ್ರಾಮದ ಅರಣ್ಯ ಪ್ರದೇಶದಲ್ಲಿ 28 ವರ್ಷದ ಕಾಡಾನೆ ‘ಮಖ್ನಾ’ ಭಾನುವಾರ ಮೃತಪಟ್ಟಿದೆ.

ಬಹು ಸೋಂಕಿನಿಂದಾಗಿ ಮಖ್ನಾ ಕಾಡಾನೆ ಮೃತಪಟ್ಟಿದೆ. ಬಾಯಲ್ಲಿ‌ ಹುಣ್ಣಾಗಿದ್ದರಿಂದ ಕೆಲ ದಿನಗಳಿಂದ ಆಹಾರ ಸೇವಿಸಲು ಸಾಧ್ಯವಾಗದೆ ತೀವ್ರ ಅನಾರೋಗ್ಯಕ್ಕೀಡಾಗಿದೆ. ನೀರು ಸಹ ಸೇವಿಸದ ಆನೆಯು ಮರದ ಬಳಿ‌ ಕುಸಿದು ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಲ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT