ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ: ಆಧುನಿಕ ಪದ್ಧತಿ ಅನುಸರಿಸಿ ಕೃಷಿಯಲ್ಲಿ ಪಾರಮ್ಯ ಸಾಧಿಸಿದ ರೈತ

ಸಮಗ್ರ ಕೃಷಿ ಲಾಭಕ್ಕೆ ಹಲವು ದಾರಿ
ಗೋವಿಂದರಾಜು.ವಿ
Published 9 ಜುಲೈ 2024, 4:57 IST
Last Updated 9 ಜುಲೈ 2024, 4:57 IST
ಅಕ್ಷರ ಗಾತ್ರ

ಹಾರೋಹಳ್ಳಿ: ಭೂಮಿ ತಾಯಿ ನಂಬಿ ನಿತ್ಯ ಹೊಲದಲ್ಲಿ ಶ್ರಮವಹಿಸಿ ಕೆಲಸ ಮಾಡುವವರಿಗೆ ಒಂದಿಲ್ಲೊಂದು ರೀತಿ ಲಾಭ ಕಟ್ಟಿಟ್ಟ ಬುತ್ತಿ. ಅದರಂತೆ ಸಮಗ್ರ ಕೃಷಿಯಲ್ಲಿ ತೊಡಗಿರುವ ರೈತರೊಬ್ಬರದ್ದು ಮಾದರಿ ನಡೆ.

ತಾಲ್ಲೂಕಿನ ಚಿಕ್ಕದೇವರಹಳ್ಳಿ ಮುದ್ದುವೀರಪ್ಪ ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್ ಓದಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಅವರು, ಈಗ ಸಮಗ್ರ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. 

ಮೂರು ಎಕರೆ ಜಮೀನು ಹೊಂದಿರುವ ಅವರು, ಹಲವು ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸುತ್ತಮುತ್ತಲಿನ ರೈತರು ಅಚ್ಚರಿಪಡುವ ರೀತಿಯಲ್ಲಿ ಕೃಷಿಯಲ್ಲಿ ಹಲವು ರೀತಿಯ ಪ್ರಯೋಗ ಕೈಗೊಂಡಿದ್ದಾರೆ.

ಲಾಭದಾಯಕ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಅದರಲ್ಲಿ ಲಾಭ ಗಳಿಸುತ್ತಿದ್ದಾರೆ.  6 ಗುಂಟೆ ಜಾಗದಲ್ಲಿ 10 ಕ್ವಿಂಟಲ್ ಶುಂಠಿ ಹಾಗೂ 5 ಎಕರೆ ಜಾಗದಲ್ಲಿ 10 ಕ್ವಿಂಟಲ್ ಅರಿಸಿನ ಬೆಳೆದಿದ್ದಾರೆ. 

 ಅರಿಶಿಸಿನದ ಬೆಳೆ
 ಅರಿಶಿಸಿನದ ಬೆಳೆ

ಸಮಗ್ರ ಕೃಷಿ: ಸುಮಾರು 70 ತೆಂಗಿನ ಮರ, ಕರಿಬೇವು, ನುಗ್ಗೆ, ಭತ್ತ 25 ಕ್ವಿಂಟಲ್, ರಾಗಿ 10 ಕ್ವಿಂಟಲ್,ಮುಸುಕಿನ ಜೋಳ, ತೊಗರಿ, ಶೇಂಗಾ ಅವರೆ ಸಮಗ್ರ ಕೃಷಿಯಲ್ಲಿ ಲಾಭ ಗಳಿಸಿದ್ದಾರೆ.

ಸಾವಯವ ಗೊಬ್ಬರ ಬಳಕೆ: ಹೊಂಗೆ, ಬೇವಿನ ಬೀಜ ಸಂಗ್ರಹಿಸಿ ಸಗಣಿ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬಳಸುತ್ತಿದ್ದಾರೆ.

ರಾಗಿ ಬೆಳೆ
ರಾಗಿ ಬೆಳೆ

ಅಧುನಿಕ ಕೃಷಿ ಪದ್ಧತಿ: ಆಧುನಿಕ ಕೃಷಿ ಪದ್ಧತಿ ಅನುಸರಿಸುವ ಮೂಲಕ ಕೃಷಿಯಲ್ಲಿ ಹೊಸತನ ಮೆರೆದಿದ್ದಾರೆ.

ಭೂಮಿ ಅಗತ್ಯತೆ ಅರಿತು ಪೋಷಕಾಂಶ, ಗೊಬ್ಬರ ನೀಡುತ್ತಾರೆ. ಕಾಲ ಕಾಲಕ್ಕೆ ಪ್ರತಿ ವರ್ಷ ಮಣ್ಣು ಪರೀಕ್ಷೆ ನಡೆಸಿ ಪೋಷಕಾಂಶ ಒದಗಿಸುತ್ತಾರೆ. ಎಲ್ಲವೂ ಸರಿ ಇದ್ದರೆ ಮಾತ್ರ ಉತ್ತಮ ಬೆಳೆ ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಮುದ್ದುವೀರಪ್ಪ.

 ಮುಸುಕಿನಜೋಳ
 ಮುಸುಕಿನಜೋಳ
ಮುದ್ದುವೀರಪ್ಪ
ಮುದ್ದುವೀರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT