ರಾಮನಗರ: ‘ಜಾನಪದ ಎನ್ನುವುದೇ ಸಾಮೂಹಿಕ ಕೆಲಸ. ಬಾಗುವ, ಬಳುಕುವಿಕೆಯ ಗುಣಲಕ್ಷಣಗಳ ಗೌರವ ಗುಣ ಜಾನಪದ ಕಲೆಗಳಲ್ಲಿ ಅಡಗಿದೆ. ಗಾಯನದಲ್ಲಿ ಮುಖ್ಯ ಗಾಯಕ ಮೇಲಾಗುತ್ತಿದ್ದು, ಕೋಲಾಟದಲ್ಲಿ ಎಲ್ಲರೂ ಮೇಲು ಕಲಾವಿದರೇ’ ಎಂದು ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯೆ ಎಚ್.ಆರ್. ಸುಜಾತ ಅಭಿಪ್ರಾಯಪಟ್ಟರು.

ನಗರದ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ ‘ಲೋಕಸಿರಿ-107' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಯುವಜನರು ತಮ್ಮನ್ನು ಪ್ರದರ್ಶಿಸಿಕೊಳ್ಳವ ಕಾಲ ಇದಾಗಿದ್ದು. ಅದಕ್ಕೆ ಕಲೆಯು ಸೂಕ್ತ ವೇದಿಕೆಯಾಗಿದೆ’ ಎಂದರು.

ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಗೌರವ ಸ್ವೀಕರಿಸಿದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಗಟಿ ಗ್ರಾಮದ ಕೋಲಾಟ ಕಲಾವಿದ ವೈ.ಎಚ್. ನಾಗಪ್ಪ ಮಾತನಾಡಿ, ‘ಮಗ ಓದಲಿ ಎಂದು ಮನೆಯವರು ಶಾಲೆಗೆ ಸೇರಿಸಿದರೂ, ಬಡತನದಿಂದಾಗಿ ನನಗೆ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ’ ಎಂದು ತಮ್ಮ ಮನದಾಳದ ಮಾತು ಹಂಚಿಕೊಂಡರು.

‘ಊರಿನಲ್ಲಿ ನಡೆಯುತ್ತಿದ್ದ ಭಜನೆ, ಕೋಲಾಟದಲ್ಲಿ ನನಗೆ ಹೆಚ್ಚು ಆಸಕ್ತಿ ಇತ್ತು. ಚಿಕ್ಕಂದಿನಿಂದಲೇ ಆ ತಂಡಗಳಲ್ಲಿ ಭಾಗವಹಿಸತೊಡಗಿದೆ. ನನ್ನ ಗುರುಗಳಾದ ತಿಮ್ಮಪ್ಪ ಅವರಿಂದ ಕುಣಿತ ಮತ್ತು ಹಾಡುಗಾರಿಕೆಯಲ್ಲಿ ಪ್ರಾವೀಣ್ಯತೆ ಪಡೆದುಕೊಂಡೆ. ಮುಂದೆ ಆ ಕಲೆಗಳಲ್ಲೇ ನನ್ನ ಬದುಕು ಕಟ್ಟಿಕೊಂಡೆ’ ಎಂದರು.

‘ನನ್ನ ತಂಡದ ಗೆಳೆಯರಾದ ಚಂದ್ರಪ್ಪ, ನಾಗರಾಜು, ಮೂಡಲಗಿರಿಯಪ್ಪ, ಕೀಲಿ ಚಂದ್ರಪ್ಪ, ರಾಮಪ್ಪ, ಮಲ್ಲೇಶಪ್ಪ, ತಿಮ್ಮೇಶ್, ಎಂ.ಬಿ. ಮಲೆಯಪ್ಪ, ರಮೇಶಪ್ಪ, ರಮೇಶ್ವರಪ್ಪ, ಜಗದೀಶಾಚಾರ್ ಅವರ ಸಹಕಾರದಿಂದಾಗಿ ಜಾನಪದ ಲೋಕದಲ್ಲಿ ಇಂದು ನನಗೆ ತಿಂಗಳ ಅತಿಥಿ ಗೌರವ ದೊರೆತಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಪ್ರಾರ್ಥನಾ ಗೀತೆಯೊಂದಿಗೆ ಕುರುಬರ ಬೀರ ದೇವರು, ಪ್ರೀತಿ-ಪ್ರೇಮ ಮತ್ತು ಹಾಸ್ಯದ ಗೀತೆಗಳೊಂದಿಗೆ ಕೋಲಾಟದ ವಿವಿಧ ಹೆಜ್ಜೆಗಳನ್ನು ನಾಗಪ್ಪ ಅವರ ತಂಡ ಪ್ರದರ್ಶಿಸಿತು. ಪತ್ರಕರ್ತ ಶ್ರೀಧರ್ ಎಸ್. ಅತಿಥಿಯಾಗಿ ಭಾಗವಹಿಸಿದ್ದರು.

ಜಾನಪದ ಲೋಕದ ಕ್ಯುರೇಟರ್ ಡಾ. ರವಿ ಯು.ಎಂ ಅತಿಥಿಗಳನ್ನು ಸ್ವಾಗತಿಸಿ ಸಂವಾದ ನಡೆಸಿಕೊಟ್ಟರು. ಪ್ರದೀಪ್ ಎಸ್. ನಿರೂಪಣೆ ಮಾಡಿದರು. ಸಂಶೋದನಾ ಸಂಚಾಲಕ ಡಾ. ಸಂದೀಪ್ ಎಸ್., ಪ್ರಾಧ್ಯಾಪಕ ಡಾ. ಶಿವರಾಜ್ ಬ್ಯಾಡರಹಳ್ಳಿ, ಎಎಸ್ಐ ವಿಜಯ್ ಕುಮಾರ್, ಡಿಪ್ಲೊಮಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.