ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ವಿರುದ್ಧ ಹೋರಾಟ ನಡೆಸುತ್ತಿರುವ ರೈತರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಸೋಮವಾರ ಭೇಟಿ ಮಾಡಿ, ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಸಲ್ಲಿಸಿದರು.

ಮಹಿಳೆಯುರು ಸೇರಿದಂತೆ ಹಲವರು ಬೆಳಿಗ್ಗೆ ತೋಟದ ಮನೆಗೆ ಹೋಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಉಪನಗರ ಯೋಜನೆಗೆ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ಶುರುವಾಗಿದೆ. ಯೋಜನೆ ವಿರುದ್ಧ ನಾವು ನಡೆಸುತ್ತಿರುವ ಅಹೋರಾತ್ರಿ ಧರಣಿ 50 ದಿನಗಳನ್ನು ಪೂರೈಸಿದ್ದರೂ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂದು ಅಳಲು ತೋಡಿಕೊಂಡರು.

ಇದುವರೆಗೆ ನಮ್ಮ ಅಳಲನ್ನು ಯಾವುದೇ ಜನಪ್ರತಿ ಆಲಿಸಿಲ್ಲ. ಈಗಾಗಲೇ ಜಮೀನಿನ ಸರ್ವೆ ಆರಂಭವಾಗಿದ್ದು, ಪರಿಹಾರ ದರ ನಿಗದಿ ಕುರಿತು ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ. ನಮ್ಮ ಹೋರಾಟಕ್ಕೆ ಜೆಡಿಎಸ್, ಬಿಜೆಪಿ ಪಕ್ಷಗಳು ಸೇರಿದಂತೆ ರೈತ ಮತ್ತು ಕನ್ನಡಪರ ಸಂಘಟನೆಗಳು ಬೆಂಬಲಿಸಿವೆ. ಆದರೂ, ಸರ್ಕಾರ ಕಣ್ತೆರೆದಿಲ್ಲ ಎಂದರು.

ನೀವು ಮುಖ್ಯಮಂತ್ರಿಯಾಗಿದ್ದಾಗ ರೂಪುಗೊಂಡಿದ್ದ ಯೋಜನೆಯನ್ನು ಸರ್ಕಾರ ಕೈ ಬಿಡಬೇಕಾದರೆ, ನಮ್ಮ ಹೋರಾಟಕ್ಕೆ ನೀವು ಬೆಂಬಲ ನೀಡಬೇಕು. ಭೂ ಸ್ವಾಧೀನ ನಿಲ್ಲಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಯೋಜನೆ ಅನುಷ್ಠಾನಗೊಂಡರೆ ಸಣ್ಣ ರೈತರು ಬೀದಿಗೆ ಬರಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಎ. ಮಂಜುನಾಥ್, ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯ ಸಂಪತ್, ಮುಖಂಡರಾದ ಸೋಮೇಗೌಡ, ಚಿಕ್ಕಣ್ಣಯ್ಯ, ಮಂಜು ಬ್ಯಾಟಪ್ಪ, ಡಾ. ಭರತ್ಕೆಂಪಣ್ಣ, ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ಕೆ. ರಾಮಯ್ಯ, ಪದಾಧಿಕಾರಿಗಳಾದ ಶ್ರೀನಿವಾಸ ರೆಡ್ಡಿ, ಮಂಡಲಹಳ್ಳಿ ನಾಗರಾಜು, ಪ್ರಕಾಶ್, ರಾಧಾಕೃಷ್ಣ, ಶ್ರೀಧರ್, ಹೇಮಂತ್, ಕೃಷ್ಣ, ನಾಗೇಶ್ಕುಮಾರ್, ಮಂಜುಳಾ, ಚೈತ್ರ, ನೇತ್ರಾ ಹಾಗೂ ಇತರರು ಇದ್ದರು.

ಚೇತರಿಕೆ ಬಳಿಕ ಹೋರಾಟಕ್ಕೆ ಬರುವೆ: ಎಚ್ಡಿಕೆ

ರೈತರ ಮನವಿ ಆಲಿಸಿದ ಕುಮಾರಸ್ವಾಮಿ ‘ಯೋಜನೆಗೆ ಭೂ ಸ್ವಾಧೀನ ಮಾಡುವ ವಿಷಯದಲ್ಲಿ ಸರ್ಕಾರ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಮತ್ತು ಎ. ಮಂಜುನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಅನಾರೋಗ್ಯದಿಂದಾಗಿ ನನಗೆ ಭಾಗವಹಿಸಲು ಸಾಧ್ಯವಾಗಿಲ್ಲ. ಇನ್ನೊಂದು ತಿಂಗಳಲ್ಲಿ ಸಂಪೂರ್ಣ ಗುಣಮುಖನಾಗಲಿದ್ದು ಬಳಿಕ ಹೋರಾಟಕ್ಕೆ ನಾನೂ ಬರುವೆ’ ಎಂದು ಭರವಸೆ ನೀಡಿದರು.