ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾವಲಂಬನೆಗೆ ಕರಕುಶಲ ಉದ್ಯಮ ಸಹಕಾರಿ: ನೀಲಿ ಲೋಹಿತ್

Published : 9 ಸೆಪ್ಟೆಂಬರ್ 2024, 5:01 IST
Last Updated : 9 ಸೆಪ್ಟೆಂಬರ್ 2024, 5:01 IST
ಫಾಲೋ ಮಾಡಿ
Comments

ಚನ್ನಪಟ್ಟಣ: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಕರಕುಶಲ ಉದ್ಯಮ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೈಸೂರಿನ ನೀಲಿ ಕಲಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ನೀಲಿ ಲೋಹಿತ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಈಚೆಗೆ ನಡೆದ ಮಣ್ಣಿನ ಆಭರಣಗಳ ಪ್ರದರ್ಶನ ಹಾಗೂ ತಯಾರಿಕರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಣ್ಣಿನ ಆಭರಣ ತಯಾರಿಕಾ ಸ್ವಉದ್ಯೋಗಕ್ಕೆ ಹೆಚ್ಚಿನ ಬಂಡವಾಳದ ಅವಶ್ಯ ಇರುವುದಿಲ್ಲ. ಬದಲಾಗಿ ಸೂಕ್ಷ್ಮತೆ ಮತ್ತು ಕ್ರಿಯಾಶೀಲತೆ ಹೊಂದಿದ್ದರೆ ಮಣ್ಣಿನ ಆಭರಣ ತಯಾರಿಕೆಯನ್ನು ಜೀವನ ನಿರ್ವಹಣೆಗೆ ಬಳಸಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಉಷಾಮಾಲಿನಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸ್ವ ಉದ್ಯೋಗ ಮೈಗೂಡಿಸಿಕೊಂಡರೆ ಸ್ವಾವಲಂಬಿಗಳಾಗಿ ಬದುಕಬಹುದು ಹಾಗೂ ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಎಸ್.ಬಿ.ಬೋರೇಗೌಡ, ಆರ್.ನಂಜುಂಡ, ಸಹ ಪ್ರಾಧ್ಯಾಪಕರಾದ ಎಸ್.ಮುಜಾಹಿದ್ ಖಾನ್, ಪ್ರಭು ಉಪಾಸೆ, ಜಗದೀಶ್ ನಡುವಿನಮಠ, ಕೆ.ಡಿ.ಆನಂದ್, ಎನ್.ಶ್ರೀಕಾಂತ್, ಶೈಲಜಾ, ವೈ.ಡಿ.ವಾಣಿ, ವೀಣಾ, ರೀಮಾ, ಚನ್ನಮ್ಮ, ಅನುರಾಧ, ಅನುಪಮಾ, ಚಂದ್ರಕಲಾ, ಗೆಜಿಟೆಡ್ ಮ್ಯಾನೇಜರ್ ಧನಂಜಯ, ಲೀಲಾ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಣ್ಣಿನ ಆಭರಣಗಳನ್ನು ಪ್ರದರ್ಶಿಸಲಾಯಿತು. ನಂತರ ಮಣ್ಣಿನ ಆಭರಣ ತಯಾರಿಕರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT