ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ: ಹೊಸ ತಾಲೂಕು ಉದ್ಘಾಟನೆಯಾಗಿ ಎರಡು ತಿಂಗಳು ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ

Published 30 ಏಪ್ರಿಲ್ 2023, 23:43 IST
Last Updated 30 ಏಪ್ರಿಲ್ 2023, 23:43 IST
ಅಕ್ಷರ ಗಾತ್ರ

ಹಾರೋಹಳ್ಳಿ : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತನ್ನ ಕೊನೆಯ ಬಜೆಟ್‌ನಲ್ಲಿ ಜಿಲ್ಲೆಯ ಐದನೇ ತಾಲೂಕು ಕೇಂದ್ರವನ್ನಾಗಿ ಹಾರೋಹಳ್ಳಿ ಪಟ್ಟಣವನ್ನು ಘೋಷಣೆ ಮಾಡಿ ಇದೇ ವರ್ಷದ ಫೆಬ್ರವರಿ ೨೧ ಉದ್ಘಾಟನೆ ಮಾಡಿದ್ದು ಹೊಸ ತಾಲೂಕ್ ಉದ್ಘಾಟನೆಯಾಗಿ ಎರಡು ತಿಂಗಳು ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ, ವಿವಿಧ ಇಲಾಖೆ ಅಧಿಕಾರಿಗಳ ನೇಮಕಾಗಿಲ್ಲ ಖಾಯಂ ಕಟ್ಟಡವಿಲ್ಲ.

ರಾಮನಗರ ಜಿಲ್ಲೆಯ ೫ನೇ ಹೊಸ ತಾಲೂಕು ಹಾರೋಹಳ್ಳಿಗೆ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇಮಕ ಮಾಡಿದ್ದು ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕೆಳ ಭಾಗದಲ್ಲಿ ತಾತ್ಕಾಲಿಕವಾಗಿ ನೂತನ ತಾಲೂಕು ಕಚೇರಿ ಮಾಡಲಾಗಿದೆ.ಉಳಿದ್ದಂತೆ ಬೇರೆ ಇಲಾಖೆಯಾಗಲ್ಲಿ ಅಥವಾ ಅಧಿಕಾರಿಗಳ ನೇಮಕ ಮಾಡಿಲ್ಲ.

ನೂತನ ತಾಲೂಕಿಗೆ ಗಡಿ:ಹಾರೋಹಳ್ಳಿ ಕೇಂದ್ರದ ಪೂರ್ವಕ್ಕೆ ತಮಿಳುನಾಡು ರಾಜ್ಯದ ಗಡಿ, ಆನೇಕಲ್ ತಾಲೂಕು ಮತ್ತು ಬೆಂಗಳೂರು ನಗರ ಜಿಲ್ಲೆಯ ಗಡಿ, ಪಶ್ಚಿಮದಲ್ಲಿ ರಾಮನಗರ ಮತ್ತು ಕನಕಪುರ ತಾಲೂಕುಗಳ ಗಡಿ, ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲೂಕು, ಆನೇಕಲ್ ಮತ್ತು ರಾಮನಗರ ತಾಲೂಕು ಗಡಿ,ದಕ್ಷಿಣಕ್ಕೆ ಕನಕಪುರ ತಾಲೂಕುಗಡಿಯನ್ನು ಹಂಚಿಕೊAಡಿದೆ.

ತಾಲೂಕು ಜನಸಂಖ್ಯೆ : ೯೦ ಸಾವಿರ ಜನಸಂಖ್ಯೆ ಹೊಂದಿರುವ ನೂತನ ತಾಲೂಕು ಹಾರೋಹಳ್ಳಿ ಹೋಬಳಿಯ ವೃತ್ತಕ್ಕೆ ೧೦೭ ಗ್ರಾಮಗಳು ಮತ್ತು ಮರಳವಾಡಿ ಹೋಬಳಿಯ ವೃತ್ತಕ್ಕೆ ೧೪೫ ಗ್ರಾಮಗಳು ಒಟ್ಟು ೨೫೨ ಗ್ರಾಮಗಳು ನೂತನ ಹಾರೋಹಳ್ಳಿ ತಾಲೂಕು ವ್ಯಾಪ್ತಿಗೆ ಬರಲಿವೆ.

೧೦೯ ಕೋಟಿ ವೆಚ್ಚಕ್ಕೆ ಅಂದಾಜು ಪಟ್ಟಿ: ಹಾರೋಹಳ್ಳಿ ತಾಲೂಕು ತಾಲೂಕು ರಚನೆ ಸಂಬAಧ ಲೋಕೋಪಯೋಗಿ ಇಲಾಖೆ ಸರ್ಕಾರಿ ಇಲಾಖೆಗಳ ಹೊಸ ಕಚೇರಿಗಳ ನಿರ್ಮಾಣಕ್ಕೆ ೧೦೯ ಕೋಟಿ ರೂ.ಗಳ ಅಂದಾಜು ವೆಚ್ಚದ ಪಟ್ಟಿ ಸಲ್ಲಿಸಿತ್ತು. ಇಲ್ಲಿಯವರೆಗೆ ಒಂದು ನಯಾಪೈಸೆ ಬಿಡುಗಡೆಯಾಗಿಲ್ಲ.ಒಂದು ತಾಲೂಕು ಕಾರ್ಯಾರಂಭಗೊಳ್ಳಬೇಕಾದರೆ ೩೨ ಇಲಾಖೆಗಳ ತಾಲೂಕು ಅಧಿಕಾರಿಗಳು ನೇಮಕವಾಗಬೇಕು.ಕಂದಾಯ ಇಲಾಖೆ ಅಧಿಕಾರಿಗಳು ನೇಮಕವಾಗಿದ್ದು ಉಳಿದ ಯಾವ ಇಲಾಖೆಗೂ ನೇಮಕ ಮಾಡಿಲ್ಲ.ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕವಾಗಬೇಕು.

೩೦ ಗುಂಟೆ ಜಮೀನು ಮೀಸಲು:ಹಾರೋಹಳ್ಳಿ ತಾಲೂಕು ಕಚೇರಿಯ ಕಟ್ಟಡಗಳನ್ನು ಪಟ್ಟಣದ ಒಳಭಾಗದಲ್ಲೇ ನಿರ್ಮಾಣ ಮಾಡಬೇಕು ಎಂಬ ಕೂಗು ಇದ್ದು ಅದರಂತೆ ಪಟ್ಟಣದ ಒಳ ಭಾಗದಲ್ಲಿ ೩೦ ಕುಂಟೆ ಮೀಸಲಿಡಲಾಗಿದೆ. ಹಾರೋಹಳ್ಳಿ ತಾಲೂಕು ಕೇಂದ್ರಕ್ಕೆ ಅತೀ ಮುಖ್ಯವಾಗಿ ತಾಲೂಕು ಕಚೇರಿ, ನ್ಯಾಯಾಲಯ ಸಂರ್ಕೀಣ, ಸ್ಥಳೀಯ ಸಂಸ್ಥೆಗಳ ಕಟ್ಟಡಗಳು, ವಾಣಿಜ್ಯ ಸಂಕೀರ್ಣ,ಸರಕಾರಿ ಕಚೇರಿಗಳು, ಜಿಲ್ಲಾ ಪಂಚಾಯತ್ ಉಪ ವಿಭಾಗಗಳು ಸೇರಿದ್ದಂತೆ ಸುಮಾರು ೩೨ ಇಲಾಖೆಗಳು ಕಟ್ಟಡಗಳು ಕಚೇರಿಗಳು ನಿರ್ಮಾಣವಾಗಬೇಕು.

ಪ್ರಗತಿಯಲ್ಲಿ ತಾಂತ್ರಿಕ ಕೆಲಸಗಳು :ದಾಖಲಾತಿಗಳು ಕನಕಪುರ ತಾಲೂಕಿನಿಂದ ಹಾರೋಹಳ್ಳಿ ತಾಲೂಕು ಎಂದು ಬದಲಾವಣೆಯಾಗಬೇಕು ಈಗಾಗಲೇ ಹಲವು ದಾಖಲಾತಿಗಳು ಹಾರೋಹಳ್ಳಿ ಎಂದು ಬದಲಾವಣೆಗೊಂಡಿದ್ದು ಪ್ರಮುಖವಾಗಿ ಕಂದಾಯ ಇಲಾಖೆಗಳ ತಾಂತ್ರಿಕ ಕೆಲಸಗಳು ಪ್ರಗತಿಯಲ್ಲಿವೆ ಜೊತೆಗೆ ಪಹಣಿ ಮೇಟೆಷನ್‌ಗಳು ಈಗಾಗಲೇ ಹಾರೋಹಳ್ಳಿ ತಾಲೂಕು ಎಂದು ನಮೂದಾಗಿವೆ.ಇನ್ನು ಕೆಲವು ತಾಂತ್ರಿಕ ಕೆಲಸಗಳು ಪ್ರಗತಿಯಲ್ಲಿವೆ.

ಗ್ರಾಪಂ ಚುನಾವಣೆಗಳು ನಡೆದಿಲ್ಲ:ಹಾರೋಹಳ್ಳಿ ಗ್ರಾಪಂನಿAದ,ಪಟ್ಟಣ ಪಂಚಾಯಿತಿಯನ್ನಾಗಿ ಬೇರ್ಪಡಿಸಿ ಕೊಳ್ಳಿಗಾನಹಳ್ಳಿ, ದ್ಯಾವಸಂದ್ರ, ಟಿ ಹೊಸಹಳ್ಳಿ, ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಗಳ ಕೆಲವು ಗ್ರಾಮಗಳನ್ನು ಗಡಿಗಳನ್ನಾಗಿ ಗುರುತಿಸಲಾಗಿತ್ತು. ಆದರೆ ಈವರೆಗೂ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಒಳಗೊಂಡAತೆ ೪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಚುನಾವಣೆ ನಡೆಯದಿರುವುದು ಗ್ರಾಮೀಣ ಪ್ರದೇಶಗಳ ಅಭಿವೃಧ್ಧಿಗೆ ಹಿನ್ನಡೆಯಾಗಿದೆ.

ರಾಜ್ಯ ಸರ್ಕಾರದ ಮುಂದಿದೆ ದೊಡ್ಡ ಸವಾಲು:ರಾಜ್ಯ ಸರ್ಕಾರ ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ ಹಾರೋಹಳ್ಳಿ ತಾಲೂಕು ಕೇಂದ್ರವನ್ನು ಉದ್ಘಾಟನೆ ಮಾಡಿದರೆ ಅಷ್ಟೇ ಸಾಲದು, ತಾಲೂಕು ಕೇಂದ್ರ ಕಾರ್ಯಾರಂಭಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಮುಂದೆ ಇರುವ ದೊಡ್ಡ ಸವಾಲು. ಈಗಾಗಲೇ ಹಾಗೂ ಹೀಗೆ ಸಾಕಷ್ಟು ಸವಲತ್ತುಗಳಿಗಾಗಿ ನೂತನ ತಾಲೂಕು ಕೇಂದ್ರ, ರಾಜ್ಯ ಸರ್ಕಾರವನ್ನು ಎದುರು ನೋಡುತ್ತಿದೆ.

ಆದಷ್ಟು ಬೇಗ ಸರಕಾರ ಇತ್ತ ಗಮನಹರಿಸಿ ಎಲ್ಲಾ ಇಲಾಖೆಗೆ ಅಧಿಕಾರಿಗಳನ್ನು ನೇಮಿಸಿ ತಾಲೂಕಿಗೆ ಬೇಕಾದ ಅಗತ್ಯ ಸೌಲಭ್ಯ ಒದಗಿಸಬೇಕು. ಜನರ ಸಮಸ್ಯೆಗಳಿಗೆ ಮುಕ್ತಿ ನೀಡುವ ಕೆಲಸ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಹಾರೋಹಳ್ಳಿ ತಾಲೂಕು ಪಟ್ಟಣ ಕೇಂದ್ರ
ಹಾರೋಹಳ್ಳಿ ತಾಲೂಕು ಪಟ್ಟಣ ಕೇಂದ್ರ
ನೂತನ ಹಾರೋಹಳ್ಳಿ ತಾಲೂಕು ನಕಾಶೆ
ನೂತನ ಹಾರೋಹಳ್ಳಿ ತಾಲೂಕು ನಕಾಶೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT