ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಗ್ರಾಮದ ಚನ್ನಕೇಶವ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಮಧ್ಯಾಹ್ನ ಸ್ವಕ್ಷೇತ್ರದಲ್ಲಿ ಜನತಾ ದರ್ಶನ ಆರಂಭಿಸಿದರು.

ಇಗ್ಗಲೂರು ಬ್ಯಾರೇಜ್ ನಲ್ಲಿ ಏತ ನೀರಾವರಿಯ ಸಿ ಬಿಂದು ಕಾಮಗಾರಿ ವೀಕ್ಷಣೆ ಮಾಡಿದ ಅವರು ಬಳಿಕ ಅವರು ಜನರಿಂದ ಮನವಿ ಸ್ವೀಕರಿಸಿದರು. ಕೆಲವರು ಗ್ರಾಮದ ರಸ್ತೆ, ದೇಗುಲ ಹಾಗೂ ಆಸ್ಪತ್ರೆ ಅಭಿವೃದ್ದಿ ಮಾಡುವಂತೆ ಮನವಿ ಮಾಡಿದರು. ಮುಖ್ಯಮಂತ್ರಿ ಸಾಗಿದ್ದ ಗ್ರಾಮಗಳ ರಸ್ತೆ ಉದ್ದಕ್ಕೂ ಜನರು ನಿಂತು ಮನವಿ ಸಲ್ಲಿಸಿದರು.

ನಂತರ ಅವರು ಅಕ್ಕೂರು, ಹೊಂಗನೂರು ಗ್ರಾಮಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಲಿದ್ದಾರೆ. ಮಂಗಳವಾರವೂ ಕಾರ್ಯಕ್ರಮ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.