ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರಾಕಾರ ಮಳೆ: ತುಂಬಿದ ಕೆರೆ, ಕಟ್ಟೆ

Published 22 ಮೇ 2024, 5:04 IST
Last Updated 22 ಮೇ 2024, 5:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ನಾಗವಾರ ಹಾಗೂ ಬೇವೂರು ಭಾಗದಲ್ಲಿ ಮಂಗಳವಾರ ಸಾಯಂಕಾಲ ಧಾರಾಕಾರ ಮಳೆ ಸುರಿಯಿತು.

ಮಧ್ಯಾಹ್ನ 3ಕ್ಕೆ ಆರಂಭವಾದ ಮಳೆ ಸಂಜೆ 5 ಗಂಟೆಯವರೆಗೆ ಮುಂದುವರೆಯಿತು. ಧಾರಾಕಾರ ಮಳೆಯಿಂದ ಹಳ್ಳ,ಕೊಳ್ಳ, ಕಾಲುವೆ  ತುಂಬಿ ಹರಿದವು. ಮಳೆ ನೀರು ಹರಿದು ಸಣ್ಣಪುಟ್ಟ ಕೆರೆ, ಕಟ್ಟೆಗಳು ತುಂಬಿವೆ. ಜಮೀನು, ತೋಟಗಳಲ್ಲಿ ನೀರು ನಿಂತಿದೆ. 


ನಾಗವಾರ, ಬೇವೂರು, ಕೆಲಗೆರೆ, ಕನ್ನಸಂದ್ರ, ಹರೂರು, ಮೊಗೇನಹಳ್ಳಿ, ಮೈಲನಾಯಕನಹಳ್ಳಿ, ಮೈಲನಾಯಕನ ಹೊಸಳ್ಳಿ, ದಶವಾರ, ಅಬ್ಬೂರು, ಪಟ್ಲು, ಚಿಕ್ಕೇನಹಳ್ಳಿ ಸೇರಿದಂತೆ ಈ ಭಾಗದಲ್ಲೂ ಧಾರಾಕಾರ ಮಳೆ ಸುರಿಯಿತು.  

ಇಂದು ಸುರಿದ ಧಾರಾಕಾರ ಮಳೆಯಿಂದ ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಷ್ಟು ಮಳೆ ಸುರಿದಿದೆ ಎಂದು ತಿಳಿಸಿದ್ದಾರೆ.

ಹಾಗೆಯೆ ನಗರ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ತಾಲ್ಲೂಕಿನ ಹಲವೆಡೆ ಸೋಮವಾರ ಹಾಗೂ ಮಂಗಳವಾರ ಸಾಧಾರಣ ಮಳೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT