ಸೋಮವಾರ, ಫೆಬ್ರವರಿ 24, 2020
19 °C

ಇಂದ್ರಧನುಷ್‌ ಲಸಿಕೆ ಹಾಕಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಅಲೆಮಾರಿ ಮತ್ತು ಇತರ ಸಮುದಾಯಗಳ ಮಕ್ಕಳು ಮತ್ತು ಗರ್ಭಿಣಿಯರಿಗೆ ಕಡ್ಡಾಯವಾಗಿ ಇಂದ್ರಧನುಷ್‌ ಲಸಿಕೆ ಹಾಕಿಸಿ, ಮಾರಕ ರೋಗಗಳಿಂದ ರಕ್ಷಿಸಿ ಎಂದು ಮಹಿಳಾ ಹಿರಿಯ ಆರೋಗ್ಯ ಸಹಾಯಕಿ ಮಂಜುಳ ಮನವಿ ಮಾಡಿದರು.

ಪಟ್ಟಣದ ಬಿ.ಕೆ.ರಸ್ತೆ, ತಿರುಮಲೆ ಕಾಲೊನಿಗಳಲ್ಲಿ ಇಂದ್ರಧನುಷ್‌ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಲೆಮಾರಿ ಸಮುದಾಯದವರು ತಮ್ಮ ಒಂದೂವರೆ ತಿಂಗಳಿಂದ ಒಂದೂವರೆ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಇಂದ್ರಧನುಷ್‌ ಲಸಿಕೆ ಹಾಕಿಸದೆ ಇರುವುದು ಅಪಾಯಕ್ಕೆ ದಾರಿಮಾಡಿಕೊಡಲಿದೆ. ಆರೋಗ್ಯ ಇಲಾಖೆಯ ಸವಲತ್ತುಗಳನ್ನು ಸರ್ವರು ಬಳಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್‌.ರಂಗನಾಥ್‌ ಮಾತನಾಡಿ, ‘ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಅಲಕ್ಷಿಸಬೇಡಿ. ಮಕ್ಕಳನ್ನು ದೃಡಕಾಯರನ್ನಾಗಿಸಲು ಆರೋಗ್ಯ ಇಲಾಖೆಯ ನಿಮಯಗಳನ್ನು ಪಾಲಿಸಬೇಕು’ ಎಂದರು.

ಪುರುಷ ಆರೋಗ್ಯ ಸಹಾಯಕ ತುಕಾರಾಮ್‌, ಆಶಾ ಮೇಲ್ವಿಚಾರಕಿ ಶ್ರೀದೇವಿ, ದಾದಿ ರುದ್ರಾಣಮ್ಮ, ಹಿರಿಯ ಪುರುಷ ಆರೋಗ್ಯ ಸಹಾಯಕ ಶಿವಸ್ವಾಮಿ, ಆರೋಗ್ಯ ಸಹಾಯಕರಾದ ರಾಜಣ್ಣ, ವನಜಾಕ್ಷಮ್ಮ ಇದ್ದರು. ಗರ್ಭಿಣಿಯರಿಗೆ ಟೆಟಾನಸ್‌ ಚುಚ್ಚುಮದ್ದು ಮತ್ತು ಮಕ್ಕಳಿಗೆ ಇಂದ್ರಧನುಷ್‌ ಲಸಿಕೆ ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)