ಶನಿವಾರ, ನವೆಂಬರ್ 23, 2019
18 °C
ಹುಟ್ಟೂರಲ್ಲಿ ರಮೇಶ್ ಅಂತ್ಯಕ್ರಿಯೆ: ಪರಮೇಶ್ವರ್ ಭಾಗಿ

ಐ.ಟಿ. ಅಧಿಕಾರಿಗಳ ವಿರುದ್ಧ ದೂರು: ರಮೇಶ್ ಸಹೋದರ

Published:
Updated:
 ರಮೇಶ್ ಅಂತ್ಯಕ್ರಿಯೆಯು‌ ಭಾನುವಾರ ಮಧ್ಯಾಹ್ನ ಅವರ ಹುಟ್ಟೂರಾದ ರಾಮನಗರ ತಾಲ್ಲೂಕಿನ ಮೆಳೆಹಳ್ಳಿ ಗ್ರಾಮದಲ್ಲಿ ನಡೆಯಿತು

ರಾಮನಗರ: 'ನನ್ನ ಸಹೋದರ ರಮೇಶ್ ಅವರನ್ನು ಐ.ಟಿ. ಅಧಿಕಾರಿಗಳು ಮನೆಗೆ ಬಂದು ವಿಚಾರಣೆ ನಡೆಸಿರುವುದಕ್ಕೆ ಸಿಸಿಟಿವಿ ಸಾಕ್ಷ್ಯ ಇದೆ. ಈ ಬಗ್ಗೆ ದೂರು ದಾಖಲಿಸುತ್ತೇನೆ' ಎಂದು ಡಾ. ಜಿ. ಪರಮೇಶ್ವರ್ ಆಪ್ತ ಕಾರ್ಯದರ್ಶಿ ರಮೇಶ್ ಸಹೋದರ ಸತೀಶ್ ತಿಳಿಸಿದರು.

ಭಾನುವಾರ ಸಹೋದರನ ಅಂತ್ಯಕ್ರಿಯೆ ಸಂದರ್ಭ ಮಾಧ್ಯಮದವರ ಜೊತೆ ಮಾತನಾಡಿದ ಅವರು 'ಐ.ಟಿ. ಅಧಿಕಾರಿ ಬಂದಿರುವುದಕ್ಕೆ ನಮ್ಮಲ್ಲಿ ಸಾಕ್ಷ್ಯ ಇದೆ‌. ವಿಚಾರಣೆ ನಡೆಸಿಲ್ಲ ಅಂತ ಅಧಿಕಾರಿಗಳು ಸುಳ್ಳು ಹೇಳಿದ್ದಾರೆ. ಐ.ಟಿ. ದಾಳಿ ಆದಾಗಿನಿಂದ ಸಹೋದರ ನನ್ನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪರಮೇಶ್ವರ್ ಅವರ ಮನೆಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಐ.ಟಿ. ಕಿರುಕುಳವೇ ಕಾರಣ' ಎಂದು ದೂರಿದರು.

ಇದನ್ನೂ ಓದಿ: ‘ಅಪ್ಪ, ನಮ್ಮನ್ನು ಬಿಟ್ಟು ಹೋದಿಯಲ್ಲಪ್ಪ’

ಹುಟ್ಟೂರಲ್ಲಿ ರಮೇಶ್ ಅಂತ್ಯಕ್ರಿಯೆ: ಪರಮೇಶ್ವರ್ ಭಾಗಿ

ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದ ರಮೇಶ್ ಅಂತ್ಯಕ್ರಿಯೆಯು‌ ಭಾನುವಾರ ಮಧ್ಯಾಹ್ನ ಅವರ ಹುಟ್ಟೂರಾದ ರಾಮನಗರ ತಾಲ್ಲೂಕಿನ ಮೆಳೆಹಳ್ಳಿ ಗ್ರಾಮದಲ್ಲಿ ನಡೆಯಿತು. ಶಾಸಕ ಡಾ.ಜಿ.ಪರಮೇಶ್ವರ ಪಾಲ್ಗೊಂಡು ತಮ್ಮ ಆಪ್ತ ಕಾರ್ಯದರ್ಶಿಗೆ ಅಂತಿಮ‌ ನಮನ ಸಲ್ಲಿಸಿದರು.

ಗ್ರಾಮದಲ್ಲಿ ಮೆರವಣಿಗೆ ಮೂಲಕ ಶವ ಕೊಂಡೊಯ್ದು ಅವರ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನೂರಾರು ಮಂದಿ ಪಾಲ್ಗೊಂಡರು.

ಇದನ್ನೂ ಓದಿ: ರಮೇಶ್ ಆತ್ಮಹತ್ಯೆ ಬಳಿಕ ಐ.ಟಿ ಶೋಧ ಮೊಟಕು

ಪ್ರತಿಕ್ರಿಯಿಸಿ (+)