ರಾಮನಗರ: ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಸೇರಿ 19 ಸಾಧಕರು ಕರ್ನಾಟಕ ಜಾನಪದ ಪರಿಷತ್ತು ನೀಡುವ ‘ಜಾನಪದ ಲೋಕ’ ಪ್ರಶಸ್ತಿಗೆ ಈ ಬಾರಿ ಭಾಜನರಾಗಿದ್ದಾರೆ.

ಜಾನಪದ ಲೋಕದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ, ಪ್ರಶಸ್ತಿ ₹10 ಸಾವಿರದಿಂದ ₹25 ಸಾವಿರದವರೆಗಿನ ನಗದು ಪುರಸ್ಕಾರ ಹಾಗೂ ಫಲಕ ಒಳಗೊಂಡಿದೆ ಎಂದು ಹೇಳಿದರು.

ಫೆ.8 ಮತ್ತು 9ರಂದು ಜಾನಪದ ಲೋಕದಲ್ಲಿ ಮಹಿಳಾ ಜಾನಪದ ಲೋಕೋತ್ಸವ ಕಾರ್ಯಕ್ರಮ ನಡೆಯಲಿದೆ. 9ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಜಾನಪದ ಲೋಕದ ಕ್ಯುರೇಟರ್ ಡಾ. ರವಿ ಯು.ಎಂ., ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ಸಂಶೋಧನಾ ಸಂಚಾಲಕ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು.

19 ಪ್ರಶಸ್ತಿ ಪುರಸ್ಕೃತರು

* ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ: ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ರಾಮನಗರ ಜಿಲ್ಲೆ * ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ: ಜಾನಪದ ವಿದ್ವಾಂಸ ಡಾ. ಕ್ಯಾತನಹಳ್ಳಿ ರಾಮಣ್ಣ ಮೈಸೂರು ಜಿಲ್ಲೆ * ನಾಡೋಜ ಡಾ.ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ: ಏಕತಾರಿ ಕಲಾವಿದ ಅಡಿವೆಪ್ಪ ಸಣ್ಣಬೀರಪ್ಪ ಕುರಿಯವರ ಏಕತಾರಿ ಕಲಾವಿದ ಹಾವೇರಿ ಜಿಲ್ಲೆ * ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ: ಬುರ್ರಾ ಕಥಾ ಕಲಾವಿದೆ ಬಸಮ್ಮ ಕಲಬುರಗಿ ಜಿಲ್ಲೆ * ದೊಡ್ಡಆಲಹಳ್ಳಿ ಗೌರಮ್ಮ–ಕೆಂಪೇಗೌಡ ಪ್ರಶಸ್ತಿ: ತಮಟೆ ಕಲಾವಿದ ದೊಡ್ಡ ಕಟುಕಯ್ಯ ಮತ್ತು ಜನಪದ ರಂಗಭೂಮಿ ನಿರ್ದೇಶಕ ಬೈರನಹಳ್ಳಿ ಶಿವರಾಮು ರಾಮನಗರ ಜಿಲ್ಲೆ * ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ: ‘ಆನೆಗೊಂದಿ ಪೇಟೆಯೊಳಗೆ’ ಕೃತಿಗಾಗಿ ಲೇಖಕ ಡಾ. ಅಮ್ಮಸಂದ್ರ ಸುರೇಶ್ * ದತ್ತಿ ಪ್ರಶಸ್ತಿ: ನಿಂಬೆವ್ವ ಶಿವಗೊಂಡ ಬಿರಾದಾರ ತತ್ವಪದ ಕಲಾವಿದೆ ವಿಜಯಪುರ ಜಿಲ್ಲೆ ಟಿ. ಯೋಗನರಸಿಂಹಮೂರ್ತಿ ತಮಟೆ ಕಲಾವಿದ ಬೆಂಗಳೂರು ನಗರ ಜಿಲ್ಲೆ ದಳವಾಯಿ ಚಿತ್ತಪ್ಪ ಗಣೆ ಕಲಾವಿದ ಬಳ್ಳಾರಿ ಜಿಲ್ಲೆ ಶಿವರಾಮೇಗೌಡ ಗೊರವ ಕುಣಿತ ಕಲಾವಿದ ಚಾಮರಾಜನಗರ ಜಿಲ್ಲೆ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಯಕ್ಷಗಾನ ಕಲಾವಿದ ದಕ್ಷಿಣ ಕನ್ನಡ ಜಿಲ್ಲೆ ಡಾ. ತುಕಾರಾಮ್ ಪೂಜಾರಿ ಜನಪದ ವಸ್ತು ಸಂಗ್ರಹಾಲಯ ತಜ್ಞ ದಕ್ಷಿಣ ಕನ್ನಡ ಜಿಲ್ಲೆ ಎಂ.ಕೆ. ರಾಮಯ್ಯ ತಂಬೂರಿ ಕಲಾವಿದ ಬೆಂಗಳೂರು ನಗರ ಜಿಲ್ಲೆ ವೈ. ಚಿನ್ನಸ್ವಾಮಿ ಹಗಲುವೇಷ ಕಲಾವಿದ ಬಳ್ಳಾರಿ ಜಿಲ್ಲೆ ಸೋಬಾನೆ ರಾಮಯ್ಯ ಸೋಬಾನೆ ಕಲಾವಿದ ತುಮಕೂರು ಜಿಲ್ಲೆ ಯೋಗೇಂದ್ರ ಅಂಟಿಗೆ-ಪಂಟಿಗೆ ಕಲಾವಿದ ಶಿವಮೊಗ್ಗ ಜಿಲ್ಲೆ ಎ.ಕೆ. ರಾಮೇಶ್ವರ ಜಾನಪದ ವಿದ್ವಾಂಸ ಕಲಬುರಗಿ ಜಿಲ್ಲೆ ಲಕ್ಷ್ಮಿ ಬುದ್ದುಗೌಡ ಹಾಲಕ್ಕಿ ಕಲಾವಿದ ಉತ್ತರ ಕನ್ನಡ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.