ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ರಾಗಿ ಮೆದೆ ಮೇಲೆ ಕಾಡಾನೆ ದಾಳಿ

Published 8 ಜನವರಿ 2024, 8:13 IST
Last Updated 8 ಜನವರಿ 2024, 8:13 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿ ಮೇಗಳದೊಡ್ಡಿ ಗ್ರಾಮದಲ್ಲಿ ರಾಗಿ ಮೆದೆ ಮೇಲೆ ಕಾಡಾನೆಗಳು ಭಾನುವಾರ ರಾತ್ರಿ  ದಾಳಿ ನಡೆಸಿವೆ.

ಮೇಗಳದೊಡ್ಡಿ ಗ್ರಾಮದ ರೈತ ರಾಜಪ್ಪ ಎಂಬುವರಿಗೆ ಸೇರಿದ ರಾಗಿ ಮೆದೆ ನಾಶವಾಗಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿ ಬೆಳೆದಿದ್ದಂತಹ ರಾಗಿಯನ್ನು ಕಟಾವು ಮಾಡಿ ಒಕ್ಕಣೆ ಮಾಡಲು ಜಮೀನಿನಲ್ಲಿ ಮೆದೆ ಮಾಡಲಾಗಿತ್ತು.

ರಾಗಿಮೆದೆ ಮಾಡಿದ ಮೇಲೂ ಕಾಡಾನೆಗಳು ದಾಳಿ ನಡೆಸಿ ರಾಗಿ ತಿಂದು ನಾಶ ಮಾಡುತ್ತಿರುವುದರಿಂದ ಆನೆಗಳು ಅದನ್ನು ತಿನ್ನದಂತೆ ಪ್ರತಿ ದಿನ ರೈತರು ಜಮೀನಿನಲ್ಲಿ ಕಾಯುತ್ತಿದ್ದರು. ಕಾವಲಿ ನಡೆವೆಯು ಕಣ್ತಪ್ಪಿಸಿ ಆನೆಗಳ ಹಿಂಡು ರಾಗಿಮೆದೆ ತಿಂದು ನಾಶ ಮಾಡಿ ಹೋಗಿವೆ. ಈ ಸಂಬಂಧ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ರೈತರು ನೀಡಿರುವ ದೂರಿನ ಮೇರೆಗೆ ಅರಣ್ಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT