ಕನಕಪುರ: ಲಾರಿ ಮತ್ತು ಟಿಪ್ಪರ್ ವಾಹನಗಳ ಸಂಚಾರದಿಂದ ರಸ್ತೆ ಮತ್ತು ಮ್ಯಾನ್ಹೋಲ್ ಹಾಳಾಗುತ್ತಿದೆ ಎಂದು ಆರೋಪಿಸಿದ ಮಹಿಳೆಯರು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.

ನಗರದ ಕೆಎಸ್ಆರ್ಸಿ ಹಿಂಭಾಗದ ಭುವನೇಶ್ವರಿ ನಗರದ 6ನೇ ತಿರುವಿನ ರಸ್ತೆಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಪಾರ್ವತಮ್ಮ, ಚೈತ್ರ, ಲಕ್ಷ್ಮಮ್ಮ, ಸರಸ್ವತಿ, ಮಂಜುಳಾ, ರಮ್ಯ ಮತ್ತು ಸೌಭಾಗ್ಯಮ್ಮ, ಗುಂಡಣ್ಣ ಲೇಔಟ್ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಸಾಮಗ್ರಿಗಳನ್ನು ಹೊತ್ತು ಬರುವ ಭಾರಿ ಗಾತ್ರದ ಟಿಪ್ಪರ್ ಮತ್ತು ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆ ಹಾಳಾಗಿದೆ.

ನಿಯಮಬಾಹಿರವಾಗಿ ಕಲ್ಲು, ಮರಳು, ಇಟ್ಟಿಗೆ ತುಂಬಿದ ಟಿಪ್ಪರ್ ಸಂಚರಿಸುವುದರಿಂದ ಚರಂಡಿ ಮತ್ತು ಮ್ಯಾನ್ ಹೋಲ್ ನಾಶವಾಗಿದೆ. ಇದನ್ನು ಸರಿಪಡಿಸುವಂತೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಬೇರೆ ಬಡಾವಣೆ ಜನರು ರಸ್ತೆಯಲ್ಲಿ ಹೋಗುವುದನ್ನು ಬೇಡ ಎನ್ನುವುದಿಲ್ಲ. ಆದರೆ, ಲಘು ವಾಹನಗಳು ಓಡಾಡುವ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿ, ಟಿಪ್ಪರ್ಗಳು ಸಂಚರಿಸುತ್ತಿವೆ. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ನಗರಸಭೆ ಹಾಳಾದ ರಸ್ತೆ ಸರಿಪಡಿಸುತ್ತಿಲ್ಲ ಎಂದು ದೂರಿದರು.

ಕನಕಪುರ: ಲಾರಿ ಟಿಪ್ಪರ್ ವಾಹನಗಳ ಸಂಚಾರದಿಂದ ರಸ್ತೆ ಮತ್ತು ಅದರಲ್ಲಿನ ಮ್ಯಾನ್ ಹೋಲ್ ಗಳು ಹಾಳಾಗುತ್ತಿವೆ ಎಂದು ಆರೋಪಿಸಿ ಮಹಿಳೆಯರು ರಸ್ತೆಗೆ ಅಡ್ಡಲಾಗಿ ಕಲ್ಲಿಟ್ಟು ಪ್ರತಿಭಟನೆ ನಡೆಸಿದ್ದು ನಗರದಲ್ಲಿ ಭಾನುವಾರ ನಡೆಯಿತು.

ನಗರದ ಕೆ ಎಸ್ ಆರ್ ಟಿ ಸಿ ಹಿಂಭಾಗದ ಭುವನೇಶ್ವರಿ ನಗರದ 6 ನೇ ತಿರುವು ರಸ್ತೆಯಲ್ಲಿ ಕಲ್ಲುಗಳೆನಿಟ್ಟು ಅಡ್ಡಲಾಗಿ ನಿಂತು, ಲಾರಿ, ಟಿಪ್ಪರ್ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಭುವನೇಶ್ವರಿ ನಗರದ ಪಕ್ಕದಲ್ಲಿ ಇರುವಂತಹ ಗುಂಡಣ್ಣ ಲೇಔಟ್ ನಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆಗಳಿಗೆ ಸಾಮಗ್ರಿಗಳನ್ನು ಭಾರಿ ಗಾತ್ರದ ಟಿಪ್ಪರ್ ಮತ್ತು ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಿರುವ ಕಾರಣದಿಂದ ರಸ್ತೆ ಹಾಳಾಗುತ್ತಿವೆ ಎಂದು ಪ್ರತಿಭಟನೆ ನಿರತ ಪಾರ್ವತಮ್ಮ, ಚೈತ್ರ, ಲಕ್ಷ್ಮಮ್ಮ, ಸರಸ್ವತಿ, ಮಂಜುಳಾ, ರಮ್ಯ, ಸೌಭಾಗ್ಯಮ್ಮ ಆರೋಪಿಸಿದರು.

ನಿಯಮ ಬಾಹಿರವಾಗಿ ಟಿಪ್ಪರ್ ಗಳು ಕಲ್ಲು, ಮರಳು, ಇಟ್ಟಿಗೆಯನ್ನು ತುಂಬಿಕೊಂಡು ಹೋಗುತ್ತಿರುವುದರಿಂದ ಚರಂಡಿಗಳು, ಒಳಚರಂಡಿ ಮ್ಯಾನ್ ಹೋಲ್ ಗಳು ನಾಶವಾಗಿವೆ, ಅದನ್ನು ಸರಿಪಡಿಸುವಂತೆ ನಗರ ಸಭೆಯವರಿಗೆ ಹತ್ತಾರು ಬಾರಿ ಮನವಿ ಮಾಡಿದರು ಅವರು ರಿಪೇರಿ ಮಾಡಿಸುತ್ತಿಲ್ಲ ಎಂದು ದೂರಿದರು.

ರಸ್ತೆಯಲ್ಲಿ ಚರಂಡಿ ಮತ್ತು ಮ್ಯಾನ್ ಹೋಲ್ ಗಳು ನಾಶವಾಗಿರುವುದರಿಂದ ಮನೆಯ ತ್ಯಾಜ್ಯದ ನೀರು, ಒಳಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿದೆ, ಗಬ್ಬು ವಾಸನೆ ಹೊಡೆಯುತ್ತಿದೆ, ಇಲ್ಲಿ ವಾಸ ಮಾಡುವುದು ತುಂಬಾ ಕಷ್ಟವಾಗುತ್ತಿದೆ, ಆದರೂ ನಮ್ಮ ಸಮಸ್ಯೆಯನ್ನು ಯಾರು ಆಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಬಡಾವಣೆಯವರು ಈ ರಸ್ತೆಯಲ್ಲಿ ಹೋಗುವುದನ್ನು ನಾವು ಬೇಡ ಎನ್ನುವುದಿಲ್ಲ, ಆದರೆ ಲಗು ವಾಹನಗಳು ಓಡಾಡುವ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿ, ಟಿಪ್ಪರ್ ಓಡಾಡುತ್ತಿವೆ. ಅದರಿಂದ ನಮ್ಮ ರಸ್ತೆಗಳು ಹಾಳಾಗುತ್ತಿವೆ, ನಗರ ಸಭೆಯವರು ಹಾಳಾಗಿರುವ ರಸ್ತೆಯನ್ನು ಸರಿಪಡಿಸುತ್ತಿಲ್ಲ. ಇಲ್ಲವೇ ಭಾರಿ ಗಾತ್ರದ ಓವರ್ ಲೋಡ್ ತುಂಬಿಕೊಂಡು ಹೋಗುವ ಲಾರಿ, ಟಿಪ್ಪರ್ ಗಳನ್ನು ತಡೆಗಟ್ಟುತ್ತಿಲ್ಲ ಎಂದು ದೂರಿದರು.

ನಮ್ಮ ಸಮಸ್ಯೆ ಪರಿಹರಿಸುವ ತನಕ ನಾವು ಈ ರಸ್ತೆಯಲ್ಲಿ ಲಾರಿ ಟಿಪ್ಪರ್ ಗಳನ್ನು ಓಡಾಡಲು ಬಿಡುವುದಿಲ್ಲ ಎಂದು ಮಹಿಳೆಯರು ಒಂದು ಗಂಟೆಗೂ ಹೆಚ್ಚಿನ ಕಾಲ ಪ್ರತಿಭಟನೆ ನಡೆಸಿದರು.

ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರ ಅಹವಾಲು ಸ್ವೀಕರಿಸಿದರು, ಹಾಳಾಗಿರುವ ಮ್ಯಾನ್ ವಾಲ್ ಮತ್ತು ಚರಂಡಿಯನ್ನು ನಗರಸಭೆಯಿಂದ ರಿಪೇರಿ ಮಾಡಿಸುವ ಭರವಸೆ ನೀಡಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.