ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ‌ ಜಿಲ್ಲೆಯಲ್ಲಿ ಥಿಯೇಟರ್‌ ಪುನರಾರಂಭ

Last Updated 2 ನವೆಂಬರ್ 2020, 2:28 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಕಂಪು ಪಸರಿಸಿತ್ತು. ರಸ್ತೆಯುದ್ದಕ್ಕೂ ಕನ್ನಡ ಬಾವುಟಗಳು ರಾರಾಜಿಸಿದವು.

ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ವಾಹನ ಚಾಲಕರು ವಾಹನಗಳ ಮೇಲೆ ಕನ್ನಡದ ಬಾವುಟ ಕಟ್ಟಿಕೊಂಡು ಚಲಿಸಿದರು. ಸಂಘ– ಸಂಸ್ಥೆಗಳು ತಮ್ಮ ಕಚೇರಿ ಮುಂಭಾಗ ಬಾವುಟ ಕಟ್ಟಿ, ಸಿಹಿ ಹಂಚಿ ಸಂಭ್ರಮಿಸಿದರು.

ದ್ವಿಚಕ್ರವಾಹನಗಳಂತೂ ಸಂಪೂರ್ಣ ಕನ್ನಡ ಮಯವಾಗಿದ್ದವು. ಆಟೊ ಚಾಲಕರು ಬೃಹತ್ ಗಾತ್ರದ ಬಾವುಟ ಕಟ್ಟಿ ಕನ್ನಡಾಭಿಮಾನ ಮೆರೆದರು.

ಕನ್ನಡದ ಬಾವುಟಗಳಿಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಾಗಿತ್ತು. ಇಷ್ಟು ದಿನ ವ್ಯಪಾರ ಇಲ್ಲದೇ ಸೊರಗಿದ್ದ ವರ್ತಕರು, ಬಾವುಟ ಮಾರಾಟದಿಂದಾಗಿ ಜೇಬು ತುಂಬಿಸಿಕೊಂಡರು. ಜಿಲ್ಲೆಯ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ.

ಚಿತ್ರಮಂದಿರ ಪ್ರದರ್ಶನ

ಜಿಲ್ಲೆಯ ಹಲವೆಡೆ ಮೊದಲ ಬಾರಿಗೆ ಚಿತ್ರಮಂದಿರಗಳು ಪುನರಾರಂಭಗೊಂಡಿವೆ. ಕಳೆದ 15 ದಿನಗಳ ಹಿಂದೆಯೇ ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಆದರೆ, ಸ್ಟಾರ್‌ ನಟರ ಚಿತ್ರಗಳು ಬಿಡುಗಡೆಯಾಗದ ಪರಿಣಾಮ ಜಿಲ್ಲೆಯ ಚಿತ್ರಮಂದಿರದ ಮಾಲೀಕರು ನವೆಂಬರ್ ಒಂದರ ತನಕ ಪ್ರದರ್ಶನ ಮಾಡದಿರಲು ನಿರ್ಧರಿಸಿದ್ದ ನಿರ್ದರಿಸಿದ್ದರು. ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಎದ್ದು ಕಂಡಿತು. ಹಳೆಯ ಸಿನಿಮಾಗಳನ್ನೇ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT