ರಾಮನಗರ: ಕರ್ನಾಟಕ ಜಾನಪದ ಪರಿಷತ್ತು ಲೋಕೋತ್ಸವ ಪ್ರಯುಕ್ತ ಪ್ರತಿ ವರ್ಷ ನೀಡುವ ‘ಜಾನಪದ ಲೋಕ’ ಪ್ರಶಸ್ತಿಗೆ ಈ ಸಲ ಪರಿಷತ್ತಿನ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ. ಪ್ರೊ.ಹಿ. ಶಿ. ರಾಮಚಂದ್ರೇಗೌಡ ಸೇರಿದಂತೆ 19 ಮಂದಿ ಭಾಜನರಾಗಿದ್ದಾರೆ.

ಜಾನಪದ ಲೋಕದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ, ಪ್ರಶಸ್ತಿ ₹10 ಸಾವಿರದಿಂದ ₹25 ಸಾವಿರದವರೆಗೆ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಹೇಳಿದರು.

ಈ ಸಲ ಫೆ. 7 ಮತ್ತು 8ರಂದು ಜಾನಪದ ಲೋಕದಲ್ಲಿ ವಿದ್ಯಾರ್ಥಿ ಜಾನಪದ ಲೋಕೋತ್ಸವ–2026 ಕಾರ್ಯಕ್ರಮ ನಡೆಯಲಿದೆ. 8ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು.

ಜಾನಪದ ಲೋಕ ದತ್ತಿ ಪ್ರಶಸ್ತಿ

ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ: ಪ್ರೊ. ಹಿ.ಶಿ. ರಾಮಚಂದ್ರೇಗೌಡ ಮೈಸೂರು ಜಿಲ್ಲೆ

ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ: ಪ್ರೊ. ಕೆ. ಚಿನ್ನಪ್ಪಗೌಡ ದಕ್ಷಿಣ ಕನ್ನಡ ಜಿಲ್ಲೆ

ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ: ಗಣೆ ವಾದನ ಕಲಾವಿದ ಚಿಕ್ಕಣ್ಣ ತುಮಕೂರು ಜಿಲ್ಲೆ

ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ: ಛಾಯಾಗ್ರಾಹಕ ಡಾ. ಸಿರಿಗಂಧ ವಿ. ಶ್ರೀನಿವಾಸಮೂರ್ತಿ ಬೆಂಗಳೂರು

ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ: ಪೂಜಾ ಕುಣಿತ ಕಲಾವಿದ ಶಿವಮಾದಯ್ಯ ಹಾಗೂ ಮೂಡಲಪಾಯ ಯಕ್ಷಗಾನ ಕಲಾವಿದ ಬೈರಪ್ಪ (ಗಂಗಣ್ಣ) ಬೆಂಗಳೂರು ದಕ್ಷಿಣ ಜಿಲ್ಲೆ

ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ: ‘ಸ್ವಾತಂತ್ರ್ಯದ ಕಿಡಿಗಳು’ ಗ್ರಂಥಕ್ಕಾಗಿ ಲೇಖಕ ಹೂಲಿ ಶೇಖರ್ ಬೆಂಗಳೂರು

ಜಾನಪದ ಲೋಕ ಪ್ರಶಸ್ತಿ

ಚಿನ್ನಮ್ಮ ಜೋಗುಳಪದ ಹಾಡುಗಾರ್ತಿ ಚಾಮರಾಜನಗರ ಜಿಲ್ಲೆ

ದೇವರಾಜು ಪೂಜಾ ಕುಣಿತ ಕಲಾವಿದ ಮಂಡ್ಯ ಜಿಲ್ಲೆ

ನಾರಾಯಣಪ್ಪ ಮಾಡಶಿರಾವಾರ ತತ್ವಪದ ಕಲಾವಿದ ರಾಯಚೂರು ಜಿಲ್ಲೆ

ಎಂ. ತಂಬೂರಿ ಸಿದ್ದರಾಜು ತಂಬೂರಿ ಕಲಾವಿದ ಬೆಂಗಳೂರು

ಮುತ್ತಪ್ಪ ಬಸವಂತಪ್ಪ ದಾತನಾಳ ಸಾಹಸ ಕಲಾವಿದ ಧಾರವಾಡ ಜಿಲ್ಲೆ

ಚನಿಯಪ್ಪ ನಾಯ್ಕ ಯಕ್ಷಗಾನ ವೇಷಧಾರಿ ಕಲಾವಿದ ಕಾಸರಗೋಡು ಕೇರಳ

ಶಾರದಮ್ಮ ಸೋಬಾನೆ ಹಾಡುಗಾರ್ತಿ ಚಿಕ್ಕಮಗಳೂರು ಜಿಲ್ಲೆ

ಭಾರತಿಬಾಯಿ ಲಂಬಾಣಿ ನೃತ್ಯ ಕಲಾವಿದೆ ಬೀದರ್ ಜಿಲ್ಲೆ

ಬಿ.ಎಸ್. ಗೌಡ (ಬೀರಪ್ಪ ಶಿವು ಗೌಡ) ಯಕ್ಷಗಾನ ಕಲಾವಿದ ಉತ್ತರ ಕನ್ನಡ ಜಿಲ್ಲೆ

ಡಾ. ಎಸ್. ರತ್ನಮ್ಮ ಸೋಲಿಗ ಕಲಾವಿದೆ ಚಾಮರಾಜನಗರ ಜಿಲ್ಲೆ

ಗಂಗಪ್ಪ ಮಹಾಲಿಂಗಪ್ಪ ಕರಡಿ ಕರಡಿ ಮಜಲು ಕಲಾವಿದ ಬಾಗಲಕೋಟೆ ಜಿಲ್ಲೆ

ಎಂ. ಬಸವರಾಜು ಗೊರವ ಕುಣಿತ ಕಲಾವಿದ ಬೆಂಗಳೂರು ಉತ್ತರ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.