ಮಾಗಡಿ: ಕರ್ನಾಟಕ ತನ್ನದೇ ಇತಿಹಾಸ ಹೊಂದಿದೆ. ಎಲ್ಲ ಕ್ಷೇತ್ರಗಳಲ್ಲೂ ಮೊದಲನೆ ಸ್ಥಾನದಲ್ಲಿ ಕರ್ನಾಟಕ ನಿಲ್ಲಲಿದೆ. ಇದು ಎಲ್ಲರಿಗೂ ಹೆಮ್ಮೆಯ ವಿಷಯ ಎಂದು ಮಾಗಡಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೊ ವ್ಯವಸ್ಥಾಪಕ ಮಂಜುನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಕಲ್ಯಾ ಗೇಟ್ ವೃತ್ತದಲ್ಲಿ ಪ್ರಯಾಣಿಕರು ಏರ್ಪಡಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಶಕ್ತಿ ಅಮೋಘ. ಮಾಹಿತಿ, ಜೈವಿಕ ತಂತ್ರಜ್ಞಾನದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಗೋದಾವರಿಗೂ ಕರ್ನಾಟಕ ಬೆಳೆದಿತ್ತು. ಇಮ್ಮಡಿ ಪುಲಿಕೇಶಿ ರಾಜ್ಯವನ್ನು ವಿಸ್ತರಿಸಿದರು. ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಹೋರಾಟ ಎಲ್ಲರಿಗೂ ಮಾದರಿ. ಜಾತಿಭೇದವಿಲ್ಲ, ಎಲ್ಲರೂ ಒಂದೇ. ಪಂಪ, ರನ್ನ, ಕುವೆಂಪು, ದಾ.ರಾ.ಬೇಂದ್ರೆ, ಬಸವಣ್ಣ ಎಲ್ಲರೂ ಇದನ್ನೇ ಸಾರಿದ್ದಾರೆ ಎಂದರು.

ಟಿ.ಸಿ.ವೆಂಕಟೇಶ್ ಮಾತನಾಡಿ, ಸಾಹಿತಿ ದೇ.ಜವರೇಗೌಡ, ಲಿಂಗೈಕ್ಯ ಸಿದ್ಧಗಂಗೆ ಡಾ.ಶಿವಕುಮಾರಸ್ವಾಮೀಜಿ, ಪದ್ಮಶ್ರೀ ವಿಜೇತೆ ಸಾಲು ಮರದ ತಿಮ್ಮಕ್ಕ ಮಾಗಡಿ ತಾಲ್ಲೂಕಿನಲ್ಲಿ ಜನಿಸಿದ ಮಹನೀಯರು. ಕರ್ನಾಟಕವಲ್ಲ, ಇಡೀ ವಿಶ್ವವೇ ಮೆಚ್ಚುವ ನಾಯಕ ಮಾಗಡಿ ಕೆಂಪೇಗೌಡ ಎಂದು ಅಭಿಪ್ರಾಯಪಟ್ಟರು.

ನಿರ್ವಾಹಕ ಮಾರುತಿ ಮಾತನಾಡಿ, ಕನ್ನಡಿಗರ ಕನಸು ಈಡೇರಬೇಕಾದರೆ ಭಾಷಾವಾರು ಪ್ರಾಂತ್ಯ ಸಂದರ್ಭದಲ್ಲಿ ಬಿಟ್ಟು ಹೋಗಿರುವ ಊರುಗಳು ನಾಡಿಗೆ ಸೇರ್ಪಡೆಯಾಗಬೇಕಿದೆ ಎಂದು ತಿಳಿಸಿದರು.

ನಿರ್ವಾಹಕ ಹುಚ್ಚಪ್ಪ ಮಾತನಾಡಿದರು.ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಬಸ್ಗೆ ಸಿಂಗಾರ ಮಾಡಲಾಗಿತ್ತು.

ನಿರ್ವಾಹಕರಾದ ಲಗಾಮಪ್ಪ, ಗಿರೀಶ್, ಮುಖಂಡರಾದ ಟಿ.ಆರ್.ವೇದಮೂರ್ತಿ, ರವಿಕುಮಾರ್, ಚರಣ್, ಚಂದ್ರಶೇಖರ್, ಜಗದೀಶ್, ಸುಮತಿ, ದಿವ್ಯಾಶ್ರೀ, ಸಾಗರ್, ಚೇತನ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.