ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಜಾತ್ರಾ ಮಹೋತ್ಸವ ಜ.12ರಿಂದ ಆರಂಭವಾಗಲಿದ್ದು, ಹನ್ನೊಂದು ದಿನ ವೈಭವದಿಂದ ನಡೆಯಲಿದೆ.
ಗ್ರಾಮೀಣ ಭಾಗದಲ್ಲಿ ಐಯ್ಯನಗುಡಿ ಜಾತ್ರೆ ಎಂದೆ ಪ್ರಚಲಿತವಾಗಿರುವ ಈ ಜಾತ್ರೆಯಲ್ಲಿ ಜ.12 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಶೂರುವಾಗಲಿವೆ.

18ರಂದು ಮಂಟಪೋತ್ಸವ ಹಾಗೂ ಉಯ್ಯಾಲೆ ಸೇವೆ, 19ರಂದು ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ ನೆರವೇರಲಿದೆ. 20ರಂದು ಡೋಲೋತ್ಸವ, ತೆಪ್ಪೋತ್ಸವ, 21ರಂದು ಕೆಂಗಲ್ ತಿರುಕಲ್ಯಾಣಿಯಲ್ಲಿ ವಸಂತೋತ್ಸವ, ಪುಷ್ಪಮುಡಿ ಉತ್ಸವ ನಡೆಯಲಿವೆ.

ದನಗಳ ಜಾತ್ರೆ

ತಾಲ್ಲೂಕಿನ ಜನ-ಜಾನುವಾರುಗಳ ಅತಿದೊಡ್ಡ ಜಾತ್ರೆಯಾಗಿರುವ ಕೆಂಗಲ್ ಆಂಜನೇಯಸ್ವಾಮಿ ಜಾತ್ರೆಯಲ್ಲಿ ದನಗಳ ಮಾರಾಟ ನಡೆಯುವುದು ವಿಶೇಷ. ಚನ್ನಪಟ್ಟಣ ರಾಮನಗರ ಕನಕಪುರ ಮದ್ದೂರು ಕುಣಿಗಲ್ ತುಮಕೂರು ಮಾಗಡಿ ಸೇರಿದಂತೆ ವಿವಿಧ ಕಡೆಗಳ ನೂರಾರು ದನಗಳನ್ನು ಇಲ್ಲಿಗೆ ತಂದು ಮಾರಾಟ ಮಾಡಲಾಗುತ್ತದೆ. ಕೆಂಗಲ್ ಅಯ್ಯನಗುಡಿ ದನಗಳ ಜಾತ್ರಾ ಸೇವಾ ಟ್ರಸ್ಟ್ ವತಿಯಿಂದ ಜ.18 ರಂದು ಉತ್ತಮ ರಾಸುಗಳ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ. ಅತ್ಯುತ್ತಮ ರಾಸುಗಳಿಗೆ ಹೋರಿ ಕರುವಿಗೆ ಹೆಣ್ಣು ಕರುವಿಗೆ ತಲಾ ಒಂದು ಚಿನ್ನದ ಪದಕ ಪ್ರಶಸ್ತಿಪತ್ರ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.