ಭಾನುವಾರ, ಜನವರಿ 26, 2020
24 °C

ವಿದ್ಯಾರ್ಥಿಗಳು ಸಾಧಕರಾದರೆ ಶಾಲೆ, ಗುರುವಿಗೆ ಕೀರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾತನೂರು (ಕನಕಪುರ): ವಿದ್ಯಾರ್ಥಿಗಳು ಶಾಲೆಯಲ್ಲಿ ಶ್ರದ್ಧಾಭಕ್ತಿಯಿಂದ ವಿದ್ಯೆ ಕಲಿತು, ಉನ್ನತ ವ್ಯಾಸಂಗ ಮಾಡಿ ಉತ್ತಮ ಸಾಧನೆ ಮಾಡಿದಾಗ ಮಾತ್ರ ಸಂಸ್ಥೆಗೆ, ವಿದ್ಯೆ ಹೇಳಿಕೊಟ್ಟ ಗುರುಗಳಿಗೂ ಕೀರ್ತಿ ಬರುತ್ತದೆ ಎಂದು ರೂರಲ್‌ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಕೆ.ಬಿ.ನಾಗರಾಜು ಹೇಳಿದರು.

ಇಲ್ಲಿನ ಸಾತನೂರು ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳ ಮೇಲೆ ಪೋಷಕರು ಅಗಾಧವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ನನ್ನ ಮಗ ಹಾಗಾಗಬೇಕು, ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಂಡಿರುತ್ತಾರೆ. ಅದೆಲ್ಲವೂ ಯಶಸ್ವಿಯಾಗಬೇಕಾದರೆ ಅದು ನಿಮ್ಮಿಂದ ಮಾತ್ರ ಸಾಧ್ಯ’ ಎಂದು ತಿಳಿಸಿದರು.

ಆಕಾಶವಾಣಿ ದೂರದರ್ಶನ ಕಲಾವಿದ ಬೇವೂರು ರಾಮಯ್ಯ ಮಾತನಾಡಿ, ‘ಸಮಯ ಎಂದೂ ನಮ್ಮನ್ನು ಕಾಯುವುದಿಲ್ಲ. ಸಿಕ್ಕ ಅವಕಾಶವನ್ನು ಸರಿಯಾದ ರೀತಿ ಬಳಕೆ ಮಾಡಿಕೊಂಡು ಏನನ್ನಾದರೂ ಸಾಧಿಸಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ಇಂತಹುದೇ ಕ್ಷೇತ್ರ ಎಂದೇನಿಲ್ಲ. ನಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಾಹಿತಿಗಳಾದ ಚೌ.ಪು.ಸ್ವಾಮಿ, ವಿಜಯ್‌ ರಾಂಪುರ, ಆರ್‌ಇಎಸ್‌ ಉಪಾಧ್ಯಕ್ಷ ಎಂ.ಎಲ್‌.ಶಿವಕುಮಾರ್‌, ಕಾರ್ಯದರ್ಶಿ ಸಿ.ರಮೇಶ್‌, ನಿರ್ದೇಶಕರಾದ ಬಲರಾಮೇಗೌಡ, ಪ್ರಾಂಶುಪಾಲ ರಾಮಚಂದ್ರೇಗೌಡ, ಸಿಂಚನ ಡಿ.ಎಸ್‌, ಸಹನ.ಎಸ್‌.ಎಂ, ಮಲ್ಲಿಕಾರ್ಜುನ್‌, ವೈ.ಸಿ.ಕುಮಾರ್‌, ಆರ್‌.ಅಶೋಕ್‌, ವೇಣು, ಆರಾಧ್ಯ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು