ಮಂಗಳವಾರ, ಆಗಸ್ಟ್ 3, 2021
24 °C

ಲ್ಯಾಬ್‌ ಟೆಕ್ನಿಷನ್‌ಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ ಕುದೂರಿನಲ್ಲಿ ಕೊರೊನಾ ಸೋಂಕು ಹರಡುತ್ತಿರುವುದರಿಂದ ಪಿಎಸ್ಐ ಮಂಜುನಾಥ ಗ್ರಾಮಸ್ಥರಿಗೆ ಓಡಾಡದಂತೆ ಎಚ್ಚರಿಕೆ ನೀಡಿದರು

ಕುದೂರು(ಮಾಗಡಿ): ಗ್ರಾಮದಲ್ಲಿನ ಲಕ್ಷ್ಮೀದೇವಿ ನಗರದ 24 ವರ್ಷದ ಯುವಕನಿಗೆ ಕೊರೊನಾ ಸೋಂಕು ಮಂಗಳವಾರ ದೃಢಪಟ್ಟಿದೆ.

ಖಾಸಗಿ ಲ್ಯಾಬ್‌ ಟೆಕ್ನಿಷನ್ ಆಗಿದ್ದು, ಗುಡೇಮಾರನಹಳ್ಳಿ ಮಹಿಳೆಯೊಬ್ಬಳಿಗೆ ಜೂನ್‌ 30 ರಂದು ರಕ್ತ ಪರೀಕ್ಷೆ ಮಾಡಿದ್ದರು. ಆ ಮಹಿಳೆಗೆ ಜುಲೈ 1ರಂದು ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಇವರನ್ನು ಜುಲೈ 2ರಂದು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕಿತನ ತಾಯಿ ಮತ್ತು ಅಣ್ಣ ಸೇರಿದಂತೆ ಮೂವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.

ಸೋಂಕಿತನ ಮನೆ ಸುತ್ತ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಡಯಾಗ್ನಸ್ಟಿಕ್‌ನಲ್ಲಿ 15 ದಿನಗಳಿಂದ ಲ್ಯಾಬ್ ಪರೀಕ್ಷೆ ಮಾಡಿಸಿರುವವರು ಸ್ವಯಂಪ್ರೇರಿತವಾಗಿ ಕುದೂರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಇಲಾಖೆ ಮನವಿ ಮಾಡಿದೆ.

ಬಿಸಲಹಳ್ಳಿ ಗ್ರಾಮದದಲ್ಲಿ 28 ವರ್ಷದ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಅನವಶ್ಯಕವಾಗಿ ಓಡಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ ಟಿ.ಎಚ್‌.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು