ಮಂಗಳವಾರ, ಮಾರ್ಚ್ 2, 2021
23 °C
ಗ್ರಾಹಕರ ನಂಬಿಕೆಗೆ ಪಾತ್ರ: ಮುಖ್ಯ ವ್ಯವಸ್ಥಾಪಕ ಆಶೀಸ್‌ ಕುಮಾರ್‌ ಅಭಿಮತ

ಚನ್ನಪಟ್ಟಣ ಎಲ್ಐಸಿ ವಿಭಾಗದ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಭಾರತೀಯ ಜೀವ ವಿಮೆ ಪ್ರತಿಯೊಬ್ಬರ ನಂಬಿಕೆಗೆ ಪಾತ್ರವಾಗಿದೆ ಎಂದು ಎಲ್ಐಸಿ ಬೆಂಗಳೂರು ವಿಭಾಗದ ಹಿರಿಯ ಮುಖ್ಯ ವ್ಯವಸ್ಥಾಪಕ ಆಶೀಸ್ ಕುಮಾರ್ ಹೇಳಿದರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೀವವಿಮಾ ನಿಗಮದ ಬೆಂಗಳೂರು ವಿಭಾಗದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಿಗಮ ತನ್ನದೇ ನಂಬಿಕೆ ಮುಖಾಂತರ ಕೋಟ್ಯಂತರ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಉತ್ತಮ ಪಾಲಿಸಿ ಪರಿಚಯಿಸಲು ಜೀವವಿಮಾ ಪ್ರತಿನಿಧಿಗಳು ಮುಂದಾಗಬೇಕು. ಪ್ರಬುದ್ಧ ಜ್ಞಾನದೊಂದಿಗೆ ಗ್ರಾಹಕರ ಜತೆಗೆ ವ್ಯವಹರಿಸಬೇಕು. ನಿಗಮದ ಪ್ರತಿನಿಧಿಗಳಿಗೆ ಗುಣಮಟ್ಟದ ತರಬೇತಿ ನೀಡಿ, ನಿಗಮದ ಯಶಸ್ಸಿಗೆ ಕಾರಣವಾಗಲು ಅಧಿಕಾರಿಗಳು ಮುಂದಾಗಬೇಕು ಎಂದರು.

ನಿಗಮದ ಚನ್ನಪಟ್ಟಣ ಶಾಖೆಯ ಮುಖ್ಯ ವ್ಯವಸ್ಥಾಪಕಿ ರತ್ನಪ್ರಭ ಮಾತನಾಡಿ, ಶಾಖೆಯು ನೂತನ ಪಾಲಿಸಿಯನ್ನು ಗ್ರಾಹಕರಿಗೆ ನೀಡುವಲ್ಲಿ ಉತ್ತಮ ಸಾಧನೆ ಮಾಡಿದೆ. ನಿಗಮದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ನಿಗಮದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕುಮಾರ್, ಬೆಂಗಳೂರು ವಿಭಾಗದ ಮುರುಳಿ ಮನೋಹರ್, ನಿಗಮದ ಸಾಧನೆ, ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದರು. ಪಟ್ಟಣದ ಶಾಖೆಯ ಉಪ ವ್ಯವಸ್ಥಾಪಕ ಸುರೇಶ್ ಕುಮಾರ್, ಮಾಗಡಿ ಶಾಖೆಯ ವ್ಯವಸ್ಥಾಪಕ ನಾಗರಾಜು, ರಾಮನಗರ ಶಾಖೆ ವ್ಯವಸ್ಥಾಪಕ ಭಾನುಪ್ರಕಾಶ್, ಅಧಿಕಾರಿ ಅನ್ಸಾರಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು