ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ವಾಹನ ಡಿಕ್ಕಿ: ಕರಡಿ ಸಾವು

Published 22 ಜೂನ್ 2024, 4:06 IST
Last Updated 22 ಜೂನ್ 2024, 4:06 IST
ಅಕ್ಷರ ಗಾತ್ರ

ಮಾಗಡಿ: ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಕರಡಿ ಮೃತಪಟ್ಡಿರುವ ಘಟನೆ ಮಾಗಡಿ- ರಾಮನಗರ ಮುಖ್ಯ ರಸ್ತೆಯ ಅತ್ತಿಂಗೆರೆ ಗೇಟ್ ಬಳಿ ಶನಿವಾರ ನಡೆದಿದೆ.

ಬೆಳಗಿನ ಜಾವ ಘಟನೆ ನಡೆದಿದೆ. ಮೃತ ಗಂಡು ಕರಡಿ ವಯಸ್ಸು ಸುಮಾರು 12 ವರ್ಷವಾಗಿದ್ದು, ವಾಹನದ ಡಿಕ್ಕಿಯ ರಭಸಕ್ಕೆ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಕರಡಿಯ ಕಳೇಬರವನ್ನು ಸ್ಥಳಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT